ಪರಿಸರ ಸ್ನೇಹಿ ಸುಡುಮದ್ದು ಮಾರಾಟಕ್ಕೆ ಮಾತ್ರ ಅವಕಾಶ : ಸುಪ್ರೀಂ
Team Udayavani, Oct 23, 2018, 11:35 AM IST
ಹೊಸದಿಲ್ಲಿ : ಪಟಾಕಿ ಮಾರಾಟದ ಮೇಲೆ ಸಾರಾಸಗಟು ನಿಷೇಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುವ, ಪರಿಸರ ಸ್ನೇಹಿ ಸುಡುಮದ್ದುಗಳನ್ನು ಮಾತ್ರವೇ ಮಾರುಕಟ್ಟೆಯಲ್ಲಿ ಮಾರುವುದಕ್ಕೆ ಅವಕಾಶ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪಟಾಕಿಗಳನ್ನು ಆನ್ ಲೈನ್ನಲ್ಲಿ ಮಾರಾಟ ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಕೇವಲ ಪರವಾನಿಗೆ ಪಡೆದ ವ್ಯಾಪಾರಸ್ಥರಿಗೆ ಮಾತ್ರವೇ ಸುಡು ಮದ್ದುಗಳನ್ನು ಮಾರಾಟ ಮಾಡುವುದಕ್ಕೆ ಅವಕಾಶ ಇರುತ್ತದೆ ಎಂದು ನ್ಯಾಯಾಧೀಶ ಅರ್ಜನ್ ಕುಮಾರ್ ಹೇಳಿದರು.
ಪರಿಸರ ಸಂರಕ್ಷಣೆಗಾಗಿ ಪರಿಸರಕ್ಕೆ ಹಾನಿಕಾರಕವಾದ ಸುಡುಮದ್ದುಗಳನ್ನು, ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರಿಸರ ಸ್ನೇಹಿ ಸುಡುಮದ್ದುಗಳನ್ನು ಮಾತ್ರವೇ ಮಾರಾಟ ಮಾಡಬಹುದಾಗಿದೆ ಎಂದು ಹೇಳಿತು.
ಆನ್ ಲೈನ್ ಮಾರಾಟ ನಿಷೇಧದಿಂದಾಗಿ ಈಗಿನುನ ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಇತರ ಆನ್ಲೈನ್ ಸಂಸ್ಥೆಗಳು ಪಟಾಕಿ, ಸುಡುಮದ್ದುಗಳನ್ನು ಮಾರುವಂತಿಲ್ಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು