8 ದಿನ; ಪೆಟ್ರೋಲ್ 2, ಡೀಸೆಲ್ 1 ರೂ. ಇಳಿಕೆ
Team Udayavani, Oct 27, 2018, 6:00 AM IST
ಹೊಸದಿಲ್ಲಿ: ಪ್ರತಿ ಲೀಟರ್ ಪೆಟ್ರೋಲ್ಗೆ ಶುಕ್ರವಾರ 26 ಪೈಸೆ, ಪ್ರತಿ ಲೀಟರ್ ಡೀಸೆಲ್ಗೆ 8 ಪೈಸೆ ಇಳಿಕೆಯಾಗಿದೆ. ಹೀಗಾಗಿ 8 ದಿನಗಳ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 2 ರೂ., ಪ್ರತಿ ಲೀಟರ್ ಡೀಸೆಲ್ಗೆ 1 ರೂ. ಇಳಿಕೆಯಾದಂತಾಗಿದೆ. ದಿಲ್ಲಿಯಲ್ಲಿ ಪೆಟ್ರೋಲ್ಗೆ 80.85 ರೂ., ಡೀಸೆಲ್ಗೆ 74.73 ರೂ. ಆಗಿತ್ತು. ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್ಗೆ 81.48 ರೂ., ಪ್ರತಿ ಲೀ. ಡೀಸೆಲ್ಗೆ 75. 11 ರೂ. ಆಗಿತ್ತು. ಮಂಗಳೂರಿನಲ್ಲಿ ಪೆಟ್ರೋಲ್ ಲೀ.ಗೆ 80.85 ಇದ್ದರೆ, ಡೀಸೆಲ್ಗೆ 74.50 ಇತ್ತು, ಉಡುಪಿ ಯಲ್ಲಿ ಪೆಟ್ರೋಲ್ಗೆ 81.17, ಡೀಸೆಲ್ಗೆ 74.81 ರೂ. ಇತ್ತು.