ಬಿಹಾರ : ಅತ್ಯರೂಪದ 77 ಆಮೆ ವಶ; ಮಹಿಳೆ ಸಹಿತ ನಾಲ್ವರು ಅರೆಸ್ಟ್
Team Udayavani, Oct 29, 2018, 4:20 PM IST
ಪೂರ್ಣಿಯಾ, ಬಿಹಾರ : ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಪೊಲೀಸರು ಅತ್ಯಪರೂಪದ ತಳಿಯ 27 ಆಮೆಗಳನ್ನು ವಶಪಡಿಸಿಕೊಂಡು ನಾಲ್ವರು ಕಳ್ಳಸಾಗಾಟಗಾರರನ್ನು ಬಂಧಿಸಿದ್ದಾರೆ.
ದಾಗಾರುವಾ ಪೊಲೀಸ್ ಠಾಣೆ ವ್ಯಾಪಿತಯ ಬಾರಸೋನಿ ಟೋಲ್ ಪ್ಲಾಜಾ ಸಮೀಪದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಜೀಪ್ ಒಂದು ತಡೆದು ಶೋಧಿಸಿದ ಪೊಲಿಸರಿಗೆ ಗೋಣಿ ಚೀಲವೊಂದರಲ್ಲಿ ಹಾಕಿಡಲಾಗಿದ್ದ 77 ಅತ್ಯಪರೂಪದ ಆಮೆಗಳು ಪತ್ತೆಯಾದವು ಎಂದು ಪೊಲೀಸ್ ಎಸ್ಪಿ ವಿಶಾಲ್ ಶರ್ಮಾ ತಿಳಿಸಿದರು.
ನಾಲ್ವರು ಬಂಧಿತರಲ್ಲಿ ಒಬ್ಟಾಕೆ ಮಹಿಳೆಯೂ ಇದ್ದು ಇವೆರಲ್ಲ ಪಶ್ಚಿಮ ಬಂಗಾಲದಿಂದ ಉತ್ತರ ಪ್ರದೇಶಕ್ಕೆ ಈ ಆಮೆಗಳನ್ನು ಮಾರಲೆಂದು ಹೋಗುತ್ತಿದ್ದರು ಎಂದು ಶರ್ಮಾ ಹೇಳಿದರು.