CONNECT WITH US  

"ಹಳದಿ'ಯಲ್ಲಿ ಮಿಂಚಿದ ರಣವೀರ್‌

ಮುಂಬಯಿ: ಬಾಲಿವುಡ್‌ನ‌ ತಾರಾ ಜೋಡಿ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡು ಕೋಣೆ ವಿವಾಹದ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಶುಕ್ರವಾರ ಬೆಂಗಳೂರಿನ ನಿವಾಸದಲ್ಲಿ ದೀಪಿಕಾ ವಿವಿಧ ಪೂಜಾ ಕಾರ್ಯ ಕ್ರಮಗಳನ್ನು ಪೂರೈಸಿದ್ದರೆ, ಅತ್ತ ಮದುಮಗ ರಣವೀರ್‌ ಸಿಂಗ್‌ ರವಿವಾರ ವಿವಾಹಪೂರ್ವ ಹಳದಿ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಬಿಳಿ ಬಣ್ಣದ ಕುರ್ತಾ ಮತ್ತು ಪೈಜಾಮಾ ಧರಿಸಿಕೊಂಡು, ಕೆನ್ನೆಗಳಿಗೆ ಅರಶಿನ ಸವರಿಕೊಂಡು ಮದುವೆಗೆ ತಯಾರಾಗುತ್ತಿರುವ ರಣವೀರ್‌ ಫೋಟೋಗಳು ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ದೀಪಿಕಾ ಕರ್ನಾಟಕದ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಕಾರಣ ನ.14 ರಂದು ಇಟಲಿಯಲ್ಲಿ ಕೊಂಕಣಿ ಪದ್ಧತಿಯ ಪ್ರಕಾರ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಮಾರನೇ ದಿನ, ಸಿಂಧಿ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ. 

Trending videos

Back to Top