CONNECT WITH US  

ಚಂಡೀಗಢ : ತಡರಾತ್ರಿ ಪಟಾಕಿ ಸಿಡಿಸಿದ 37 ಮಂದಿ ಅರೆಸ್ಟ್‌

ಚಂಡೀಗಢ : ಈ ಬಾರಿಯ ದೀಪಾವಳಿ ಹಬ್ಬದಂದು ಜನರು ಪಟಾಕಿಯನ್ನು ರಾತ್ರಿ 8ರಿಂದ 10 ಗಂಟೆಯ ಅವಧಿಯಲ್ಲಿ ಮಾತ್ರವೇ ಉರಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಗೈದ ಸುಮಾರು 37 ಮಂದಿಯನ್ನು ಪೊಲೀಸರು ಚಂಡೀಗಢದಲ್ಲಿ ಬಂಧಿಸಿದ್ದಾರೆ.

ಪಂಜಾಬ್‌ ಮತ್ತು ಹರಿಯಾಣದ ಆದ್ಯಂತ ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಗೈದು ರಾತ್ರಿ ಪೂರ್ತಿ ಪಟಾಕಿ ಸಿಡಿಸಿ ಸಂಭ್ರಮಿಸಿರುವುದು ವರದಿಯಾಗಿದೆ. 

ದೇಶದಲ್ಲೇ ಗರಿಷ್ಠ ವಾಯು ಮಾಲಿನ್ಯದ ನಗರವೆಂದು ಕುಪ್ರಸಿದ್ಧವಾಗಿರುವ ಲೂಧಿಯಾನದಲ್ಲಿ ತಡರಾತ್ರಿ ಪಟಾಕಿ ಸಿಡಿಸಿದ 14 ಕೇಸುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 

ಚಂಡೀಗಢದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆಗೈದು ತಡರಾತ್ರಿ ಪಟಾಕಿ ಸಿಡಿಸಿದ 38 ಪ್ರಕಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 

Trending videos

Back to Top