CONNECT WITH US  

ಮಂಗಳೂರು ವಿಮಾನ ನಿಲ್ದಾಣ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ

ಹೊಸದಿಲ್ಲಿ: ಮಂಗಳೂರು ಸಹಿತ ದೇಶದ ಆರು ವಿಮಾನ ನಿಲ್ದಾಣಗಳನ್ನು ಸರಕಾರಿ - ಖಾಸಗಿ ಸಹಯೋಗದಡಿ (ಪಿಪಿಪಿ) ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಈ ನಿಲ್ದಾಣಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡಲು ತೀರ್ಮಾನಿಸಲಾಗಿದೆ. ದಿಲ್ಲಿಯಲ್ಲಿ ಗುರುವಾರ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಈ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಬೆಂಗಳೂರು, ಮುಂಬಯಿ, ಹೈದರಾ ಬಾದ್‌ ಹಾಗೂ ದಿಲ್ಲಿ ನಿಲ್ದಾಣಗಳು ಪಿಪಿಪಿ ಅಡಿಯಲ್ಲಿ ವಿಶ್ವದರ್ಜೆಯ ಸೌಲಭ್ಯ ಪಡೆದಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಲಾಭ ತಂದು ಕೊಟ್ಟಿವೆ. ಹಾಗಾಗಿ ಮಂಗಳೂರು, ಜೈಪುರ, ಅಹಮದಾಬಾದ್‌, ಲಕ್ನೋ, ಗುವಾಹಾಟಿ, ತಿರುವನಂತಪುರ ನಿಲ್ದಾಣಗಳನ್ನೂ ಇದೇ ರೀತಿ ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಗಿದೆ.

Trending videos

Back to Top