ಬಾಝೀಗರ್ಗಿತ್ತು 2 ಕ್ಲೈಮ್ಯಾಕ್ಸ್
Team Udayavani, Nov 12, 2018, 8:55 AM IST
ಮುಂಬಯಿ: ಶಾರೂಖ್ ಖಾನ್ ಅಭಿನಯದ ‘ಬಾಝಿಗರ್’ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಎರಡು ರೀತಿಯಲ್ಲಿ ಶೂಟ್ ಮಾಡಲಾಗಿತ್ತೆಂಬ ಕುತೂಹಲಕಾರಿ ವಿಚಾರವೊಂದನ್ನು ಆ ಚಿತ್ರದ ನಿರ್ದೇಶಕ ಅಬ್ಟಾಸ್-ಮಸ್ತಾನ್ ಹೊರಹಾಕಿದ್ದಾರೆ. 1993ರಲ್ಲಿ ಬಿಡುಗಡೆಯಾದ ಈ ಚಿತ್ರ ಬಿಡುಗಡೆಯಾಗಿ 25 ವರ್ಷ ಸಂದ ಹಿನ್ನೆಲೆಯಲ್ಲಿ ‘ಪಿಟಿಐ’ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
‘ಚಿತ್ರವು ದುಷ್ಟ ವ್ಯಕ್ತಿಯಿಂದ ಅನ್ಯಾಯಕ್ಕೊಳಗಾಗಿದ್ದ ಮಹಿಳೆಯೊಬ್ಬಳ ಮಗ, ಪ್ರತೀಕಾರ ತೀರಿಸಿಕೊಳ್ಳುವ ಕಥೆಯನ್ನು ಹೊಂದಿದೆ. ಈ ಕಥೆಯ ಅಂತ್ಯದಲ್ಲಿ ಹೀರೋ ತನ್ನ ತಾಯಿಗೆ ತಾನು ಕೈಗೊಂಡ ಪ್ರತೀಕಾರವನ್ನು ತಿಳಿಸಿ ಪ್ರಾಣ ಬಿಡಬೇಕು ಎಂದು ನಿರ್ಧರಿಸಿದ್ದೆವು. ಆದರೆ, ತಾಯಿ ಪಾತ್ರಕ್ಕೆ ಆಯ್ಕೆಯಾಗಿದ್ದ ಹಿರಿಯ ನಟಿ ರಾಖೀ ಗುಲ್ಜಾರ್ ಹೀರೋ ಸಾಯುವುದರಿಂದ ಪ್ರೇಕ್ಷಕರಿಗೆ ನಿರಾಸೆ ಆಗಬಹುದು ಎಂದು ಅನುಮಾನಿಸಿದ್ದರಿಂದ ಎರಡು ರೀತಿ ಕ್ಲೈಮ್ಯಾಕ್ಸ್ ಚಿತ್ರೀಕರಿಸಲಾಗಿತ್ತು. ಒಂದರಲ್ಲಿ ಹೀರೋ ಸಾಯುವುದು, ಮತ್ತೂಂದರಲ್ಲಿ ಆತನನ್ನು ಪೊಲೀಸರು ಬಂಧಿಸುವಂತೆ ಚಿತ್ರಿಸಲಾಗಿತ್ತು. ಆದರೆ, ಚಿತ್ರದ ಮೊದಲ ಕಾಪಿ ಬಂದಾಗ ಹೀರೋ ಸಾಯುವ ದೃಶ್ಯವೇ ಹೆಚ್ಚು ತೂಕಬದ್ಧವಾಗಿದ್ದರಿಂದ ಅದನ್ನೇ ಉಳಿಸಿಕೊಳ್ಳಲಾಯಿತು’ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ