ದೀಪ್-ವೀರ್ ಫೋಟೋ ವೈರಲ್
Team Udayavani, Nov 16, 2018, 12:35 PM IST
ಹೊಸದಿಲ್ಲಿ: ಬಾಲಿವುಡ್ ತಾರಾಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ವಿವಾಹವು ಸಿಂಧಿ ಸಂಪ್ರದಾಯದಂತೆ ಇಟೆಲಿಯ ಲೇಕ್ ಕೋಮೋದ ವಿಲ್ಲಾ ಡೆಲ್ ಬಲ್ಬಿಯನೆಲ್ಲೋದಲ್ಲಿ ಗುರುವಾರ ಅದ್ಧೂರಿಯಾಗಿ ನಡೆಯಿತು. ಬುಧವಾರವಷ್ಟೇ ಕೊಂಕಣಿ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನ ಪ್ರವೇಶಿಸಿದ್ದರು. ವಿಶೇಷವೆಂದರೆ, ದೀಪಿಕಾ ಮತ್ತು ರಣವೀರ್ ಅವರು ಗುರುವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಏಕಕಾಲಕ್ಕೆ ತಮ್ಮ ವಿವಾಹದ ಮೊದಲ ಫೋಟೋಗಳನ್ನು ಹಂಚಿಕೊಂಡರು. ಕೊಂಕಣಿ ಶೈಲಿಯ ಮದುವೆ ಸಮಾರಂಭದ ವೇಳೆ ರಣವೀರ್ ಕ್ರೀಮ್- ವೈಟ್ ಕುರ್ತಾ ಧರಿಸಿದ್ದರೆ, ದೀಪಿಕಾ ಕೆಂಗಂದು ಬಣ್ಣದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದಾರೆ.