ದೀಪಿಕಾ ಉಂಗುರದ ಬೆಲೆ ಎಷ್ಟು ಗೊತ್ತೇ?
Team Udayavani, Nov 17, 2018, 7:38 AM IST
ಹೊಸದಿಲ್ಲಿ: ಬಾಲಿವುಡ್ ನಟ ರಣವೀರ್ ಸಿಂಗ್ರನ್ನು ನಟಿ ದೀಪಿಕಾ ಪಡುಕೋಣೆ ಅವರು ಇಟಲಿಯಲ್ಲಿ ಮದುವೆ ಯಾಗುವುದಕ್ಕೂ ಮುನ್ನ ಅವರಿಬ್ಬರ ನಿಶ್ಚಿತಾರ್ಥದ ವೇಳೆ ರಣವೀರ್ ಸಿಂಗ್, ದೀಪಿಕಾ ಅವರಿಗೆ ತೊಡಿ ಸಿದ ಎಂಗೇಜ್ಮೆಂಟ್ ಉಂಗುರದ ಮೌಲ್ಯ ಎಷ್ಟು ಗೊತ್ತಾ? ಅದನ್ನು ಕೇಳಿದರೆ ನೀವು ಗಾಬರಿ ಯಾಗುತ್ತೀರಿ ಎನ್ನುತ್ತದೆ ಮಾಧ್ಯಮ ವೊಂದರ ವರದಿ.
ಅಂಥದ್ದೇನಿದೆ ಈ ಉಂಗುರದಲ್ಲಿ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಇದನ್ನು ಬಹುದೊಡ್ಡ ರತ್ನವೊಂದರಿಂದ ತಯಾರಿಸಲಾಗಿದೆ ಎಂದು ಇಂಡಿಯಾ ಟುಡೇ ಹೇಳಿದೆ. ಇನ್ನು “ಬಾಲಿ ವುಡ್ ಲೈಫ್’ ಈ ಉಂಗುರದ ವಿನ್ಯಾಸದ ಮಾಹಿತಿ ನೀಡಿದ್ದು, ಇದರ ಬೆಲೆ 1.3ರಿಂದ 2.7 ಕೋಟಿ ರೂ.ಗಳಷ್ಟಿರಬಹುದು ಎಂದು ಹೇಳ ಲಾಗಿದೆ. ನಟಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ನಿಶ್ಚಿತಾರ್ಥ ಉಂಗುರ ಸುಮಾರು 1 ಕೋಟಿ ರೂ.ಗಳ ಬೆಲೆಯುಳ್ಳ ದ್ದಾಗಿದ್ದು, ದೀಪಿಕಾ- ರಣ ವೀರ್ ಜೋಡಿ ಆ ದಾಖಲೆಯನ್ನು ಮುರಿದಿದೆ ಎಂದು ಹೇಳಲಾಗಿದೆ.