ಅಲಿಕ್ ಪದಮ್ಸೀ ನಿಧನ
Team Udayavani, Nov 18, 2018, 6:00 AM IST
ಮುಂಬಯಿ: ಜಾಹೀರಾತು ನಿರ್ದೇಶಕ ಹಾಗೂ ಖ್ಯಾತ ರಂಗ ಕರ್ಮಿ ಅಲಿಕ್ ಪದಮ್ಸೀ (90) ಮುಂಬೈನಲ್ಲಿ ಶನಿವಾರ ನಿಧನರಾಗಿದ್ದಾರೆ. ಹಲವು ಜನಪ್ರಿಯ ಸಂಸ್ಥೆಗಳಿಗೆ ಜಾಹೀ ರಾತು ರೂಪಿಸಿದ ಹೆಗ್ಗಳಿಕೆ ಹೊಂದಿರುವ ಇವರು, ವಯೋ ಸಹಜ ಅನಾರೋಗ್ಯದಿಂದಾಗಿ ಕೆಲವೇ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಲಿಂಟಾಸ್ ಎಂಬ ಜಾಹೀರಾತು ಸಂಸ್ಥೆಯ ಸಿಇಒ ಆಗಿದ್ದ ಪದಮ್ಸೀ, ನಂತರ ಅದೇ ಸಂಸ್ಥೆಯ ದಕ್ಷಿಣ ಏಷ್ಯಾ ಪ್ರಾದೇ ಶಿಕ ಮುಖ್ಯಸ್ಥರೂ ಆಗಿದ್ದರು. ಸಫ್ì ಎಕ್ಸೆಲ್ನ ಲಲಿತಾಜಿ, ಬಜಾಜ್ ಕಂಪನಿಯ ಹಮಾರಾ ಬಜಾಜ್ ಹಾಗೂ ಎಂಆರ್ಎಫ್ನ ಮಸಲ್ ಮ್ಯಾನ್ ಸೇರಿದಂತೆ ಹಲವು ಜನಮೆಚ್ಚಿದ ಜಾಹೀ ರಾತುಗಳನ್ನು ರೂಪಿಸಿದ್ದಾರೆ. ನಟರಾಗಿಯೂ ಹೆಸ ರಾಗಿದ್ದ ಇವರು ರಿಚರ್ಡ್ ಅಟೆನ್ಬರೋ ನಿರ್ದೇಶಿಸಿದ “ಗಾಂಧಿ’ ಸಿನಿಮಾದಲ್ಲಿ ಮೊಹಮದ್ ಅಲಿ ಜಿನ್ನಾ ಪಾತ್ರ ನಿರ್ವಹಿಸಿ ಹೆಸರಾಗಿದ್ದರು.
60 ವರ್ಷಗಳ ವೃತ್ತಿ ಜೀವನದಲ್ಲಿ 70 ಕ್ಕೂ ಹೆಚ್ಚು ನಾಟಕ ಗಳನ್ನು ಇವರು ನಿರ್ದೇಶಿಸಿದ್ದಾರೆ. ಗಿರೀಶ್ ಕಾರ್ನಾಡ್ ರಚಿಸಿದ ತುಘಲಕ್ ನಾಟಕ ಸೇರಿದಂತೆ ಹಲವು ನಾಟಕಗಳನ್ನು ಇವರು ನಿರ್ದೇಶಿಸಿದ್ದಾರೆ. 2000 ನೇ ಇಸ್ವಿಯಲ್ಲಿ ಇವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಹಲವು ಗಣ್ಯರು, ಬಾಲಿವುಡ್ ನಟ ನಟಿಯರು ಕಂಬನಿ ಮಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ