ಸಚಿನ್ ಪೈಲಟ್ಗೆ ಟೋಂಕ್ ನವಾಬರ ಬೆಂಬಲ; ಮತ ಹಾಕಲು ಒತ್ತಾಯ
Team Udayavani, Nov 22, 2018, 12:15 PM IST
ಜೈಪುರ : ಮುಂಬರುವ ರಾಜಸ್ಥಾನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಪೈಲಟ್ಗೆ ಟೋಂಕ್ನ ಮಾಜಿ ನವಾಬ ಕುಟುಂಬ ತನ್ನ ಬೆಂಬಲವನ್ನು ಪ್ರಕಟಿಸಿದೆ.
ಟೋಂಕ್ನ ನವಾಬ ಅಫ್ತಾಬ್ ಅಲಿ ಖಾನ್ ಅವರು ತನ್ನ ಸಮುದಾಯದ ಸದಸ್ಯರಿಗೆ ಪೈಲಟ್ಗೆ ಮತ ಹಾಕುವಂತೆ ಒತ್ತಾಯಿಸಿದ್ದಾರೆ. ಟೋಂಕ್ ನವಾಬರು ಪಟ್ಟಣದಲ್ಲಿ ಭಾರೀ ಪ್ರಭಾವವನ್ನು ಹೊಂದಿದ್ದಾರೆ. ಆದರೆ ಅವರು ರಾಜಕಾರಣದಲ್ಲಿ ಇಲ್ಲ.
ಸಚಿನ್ ಪೈಲಟ್ ವಿರುದ್ದ ಬಿಜೆಪಿ, ಸಾರಿಗೆ ಸಚಿವ ಯೂನುಸ್ ಖಾನ್ ಅವರನ್ನು ಕಣಕ್ಕಿಳಿಸಿದೆ. ಇವರು ಪಕ್ಷದ ಏಕೈಕ ಮುಸ್ಲಿಂ ಮುಖವಾಗಿದ್ದಾರೆ.