ಕ್ರೈಸ್ತ ಪದ್ಧತಿಯಂತೆ ಪಿಂಕಿ-ಜೊನಾಸ್ ವಿವಾಹ
Team Udayavani, Dec 2, 2018, 6:00 AM IST
ಜೋಧಪುರ: ಬಾಲಿವುಡ್-ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪ್ರಿಯಕರ ನಿಕ್ ಜೊನಾಸ್ ಅವರ ಮೂರು ದಿನಗಳ ವಿವಾಹ ಮಹೋತ್ಸವಕ್ಕೆ ಶನಿವಾರ ಚಾಲನೆ ಸಿಕ್ಕಿದೆ. ಜೋಧಪುರದ ಉಮೇದ್ ಭವನ್ ಅರಮನೆಯಲ್ಲಿ ಕ್ರೈಸ್ತ ಧರ್ಮದ ಪ್ರಕಾರ ಈ ಇಬ್ಬರೂ ಶನಿವಾರ ವಿವಾಹವಾಗಿದ್ದು, ಭಾನುವಾರ ಹಿಂದೂ ಸಂಪ್ರದಾಯದ ಪ್ರಕಾರ ಸತಿ-ಪತಿ ಆಗಲಿದ್ದಾರೆ.
ಉಮೇದ್ ಭವನ್ ಅರಮನೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭ ದಲ್ಲಿ ಇವರಿಬ್ಬರ ವಿವಾಹ ಕ್ಯಾಥೋಲಿಕ್ ಚರ್ಚ್ನ ವೈವಾಹಿಕ ವಿಧಿವಿಧಾನಗಳಂತೆ ನೆರವೇರಿತು. ಪಾದ್ರಿಯೊಬ್ಬರು ಪ್ರಿಯಾಂಕಾರನ್ನು ಉದ್ದೇಶಿಸಿ ವರ ನಿಮಗೆ ಒಪ್ಪಿಗೆಯೇ ಎಂದು ಕೇಳಿದ್ದಕ್ಕೆ ಪ್ರಿಯಾಂಕಾ, “ಒಪ್ಪಿಗೆಯಿದೆ’ ಎಂದು ಹೇಳಿದರು. ಆನಂತರ, ಜೊನಾಸ್ ಸಹ ಒಪ್ಪಿಗೆ ಸೂಚಿಸಿದ ಮೇಲೆ ಜೊನಾಸ್ ಅವರು ಪ್ರಿಯಾಂಕಾ ಅವರ ಬೆರಳಿಗೆ ಉಂಗುರ ತೊಡಿಸಿ ಚುಂಬಿಸುವ ಮೂಲಕ ವಿವಾಹ ನೆರವೇರಿತು. ಇದಕ್ಕೆ ಜೊನಾಸ್ ತಂದೆ ಪಾಲ್ ಕೆವಿನ್ ಸಾಕ್ಷಿಯಾದರು. ಈ ಸಮಾರಂಭಕ್ಕಾಗಿ ಲಂಡನ್ನ ಪ್ರತಿಷ್ಠಿತ ವಸ್ತ್ರ ವಿನ್ಯಾಸಕ ರಾಲ್ಫ್ ಲೋರೆನ್ ವಿನ್ಯಾಸಗೊಳಿಸಿದ್ದ ಉಡುಗೆಗಳಲ್ಲಿ ಮದುಮಕ್ಕಳು ಮಿಂಚುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ