“ನೊಮೊಫೋಬಿಯಾ’ಗೆ ವರ್ಷದ ಪದ ಹೆಗ್ಗಳಿಕೆ
Team Udayavani, Dec 2, 2018, 6:00 AM IST
ನವದೆಹಲಿ: ಜಗದ್ವಿಖ್ಯಾತ ಕೇಂಬ್ರಿಜ್ ಆಂಗ್ಲ ನಿಘಂಟು ಆಡಳಿತ ಮಂಡಳಿ, ಹೊಸದಾಗಿ ರೂಪುಗೊಂಡಿರುವ “ನೊಮೊಫೋಬಿಯಾ’ ಎಂಬ ಪದವನ್ನು ವರ್ಷದ ಪದವೆಂದು ಘೋಷಿಸಿದೆ. “ನೊಮೋಫೋಬಿಯಾ’ ಎಂದರೆ, “ತನ್ನೊಂದಿಗೆ ಮೊಬೈಲ್ ಇಲ್ಲವೆಂದು ಅರಿವಿಗೆ ಬಂದಾಗ ಅಥವಾ ಮೊಬೈಲ್ ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದಾಗ ವ್ಯಕ್ತಿ ಯೊಬ್ಬ ಅನುಭವಿಸುವ ಭೀತಿ’ ಎಂದು ವ್ಯಾಖ್ಯಾನಿಸಲಾಗಿದೆ.
ವರ್ಷದ ಪದವೆಂಬ ಹೆಗ್ಗಳಿಕೆಗೆ ಪಾತ್ರವಾಗಲು “ಜೆಂಡರ್ ಗ್ಯಾಪ್’, “ಎಕೋಸೈಡ್’, ನೋ-ಪ್ಲಾಟ್ಫಾರ್ಮಿಂಗ್’ ಎಂಬಿ ತ್ಯಾದಿ ಹೊಸ ಪದಗಳು “ನೊಮೊಫೋಬಿಯಾ’ಕ್ಕೆ ತೀವ್ರ ಸ್ಪರ್ಧೆಯೊಡ್ಡಿದ್ದವು. ಹಾಗಾಗಿ, ನಿಘಂಟುವಿನ ಆಡಳಿತ ಮಂಡಳಿ ತನ್ನ ಬ್ಲಾಗ್ ಓದುಗರಿಗೆ ಈ ಪದಗಳಲ್ಲೊಂದನ್ನು ವರ್ಷದ ಪದವಾಗಿ ಆಯ್ಕೆ ಮಾಡುವಂತೆ ಸೂಚಿಸಿತ್ತು. ಇದರನ್ವಯ ಬ್ಲಾಗ್ ಓದು ಗರು ಆನ್ಲೈನ್ನಲ್ಲಿ ನೀಡಿದ ಮತಗಳ ಆಧಾರ ದಲ್ಲಿ “ನೊಮೊ ಫೋಬಿಯಾ’ಕ್ಕೆ ಈ ಹೆಗ್ಗಳಿಕೆ ಸಿಕ್ಕಿದೆ ಎಂದು ಕೇಂಬ್ರಿಜ್ ನಿಘಂಟು ಆಡಳಿತ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ