ಪಿಂಕಿ ಮದುವೆಯಲ್ಲಿ ಆನೆ, ಕುದುರೆ: ಪೆಟಾ ಆಕ್ಷೇಪ
Team Udayavani, Dec 4, 2018, 12:15 PM IST
ಮುಂಬಯಿ: ಜೋಧಪುರದಲ್ಲಿ ರವಿವಾರ ನಡೆದ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಅವರ ಹಿಂದೂ ಪದ್ಧತಿಯ ವಿವಾಹದ ವೇಳೆ ಆನೆಗಳನ್ನು ಹಾಗೂ ಕುದುರೆಗಳನ್ನು ಬಳಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನು ಟ್ವಿಟರ್ನಲ್ಲಿ ಆಕ್ಷೇಪಿಸಿರುವ ಪೆಟಾ ಸಂಸ್ಥೆಯು, ‘ಪ್ರಿಯಾಂಕಾ, ಜೋನಾಸ್, ನಿಮ್ಮ ಮದುವೆಗೆ ಪ್ರಾಣಿಗಳನ್ನು ಬಳಸಿದ್ದೀರಿ. ನಿಮಗೆ ಅದು ಖುಷಿ ನೀಡಿದ್ದರೂ, ಪ್ರಾಣಿಗಳಿಗೆ ಹಿಂಸೆಯಾಗಿರುತ್ತದೆ’ ಎಂದಿದೆ.