ಅಮೆರಿಕ ಅಡ್ಡಿ ಮಾಡಿದರೆ ತೈಲ ಮಾರಾಟಕ್ಕೆ ತಡೆ
Team Udayavani, Dec 5, 2018, 9:05 AM IST
ಜಿನೀವಾ: ಕಠಿನಾತಿಕಠಿನ ಆರ್ಥಿಕ ದಿಗ್ಬಂಧಗಳ ವಿರುದ್ಧ ಖಡಕ್ ಪ್ರತಿಕ್ರಿಯೆ ನೀಡಿರುವ ಇರಾನ್, ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇರಾನ್ನಿಂದ ಕಚ್ಚಾತೈಲ ರಫ್ತಿಗೆ ಅಡ್ಡಿಪಡಿಸಿದ್ದೇ ಆದಲ್ಲಿ, ಪರ್ಶಿಯನ್ ಗಲ್ಫ್ ಪ್ರದೇಶದಿಂದ ಯಾವುದೇ ದೇಶಕ್ಕೆ ಒಂದು ಹನಿ ತೈಲವೂ ರಫ್ತಾಗದಂತೆ ನೋಡಿಕೊಳ್ಳುತ್ತೇವೆ ಎಂದು ಇರಾನ್ ಅಧ್ಯಕ್ಷ ಹಸನ್ ರೊಹಾನಿ ಎಚ್ಚರಿಕೆ ನೀಡಿದ್ದಾರೆ.
ಇರಾನ್ನ ಶಹ್ರೌಂಡ್ ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ‘ನಾವು ಇತರ ದೇಶಗಳಿಗೆ ಕಚ್ಚಾ ತೈಲ ಮಾರಾಟ ಮಾಡಿಯೇ ತೀರುತ್ತೇವೆ ಎನ್ನುವುದನ್ನು ಅಮೆರಿಕ ಮನಗಾಣಬೇಕು. ಒಂದು ವೇಳೆ ಅದಕ್ಕೆ ಅಮೆರಿಕ ತಡೆಯೊಡ್ಡಿದರೆ, ಪರ್ಶಿಯನ್ ಕೊಲ್ಲಿ ಪ್ರದೇಶದಿಂದ ಯಾವುದೇ ರಾಷ್ಟ್ರಕ್ಕೆ ಕಚ್ಚಾ ತೈಲ ರಫ್ತಾಗದಂತೆ ಮಾಡುತ್ತೇವೆ’ ಎಂದು ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. ದೇಶದ ಅರ್ಥ ವ್ಯವಸ್ಥೆಯನ್ನು ಪತನ ಮಾಡುವ ಅಮೆರಿಕದ ಪ್ರಯತ್ನ ನಡೆಯದು ಎಂದೂ ಅವರು ಹೇಳಿದ್ದಾರೆ. ಜುಲೈಯಲ್ಲಿ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದ ರೊಹಾನಿ, ಅಮೆರಿಕ ಸಿಂಹದ ಬಾಲ ತುಳಿಯುವ ಪ್ರಯತ್ನ ಮಾಡಬಾರದು ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್