CONNECT WITH US  

ಅಮೃತಸರ ರೈಲು ದುರಂತ: ನವಜೋತ್‌ ಸಿಧು, ಪತ್ನಿಗೆ ಕ್ಲೀನ್‌ ಚಿಟ್‌

ಹೊಸದಿಲ್ಲಿ : ಪಂಜಾಬ್‌ ಸಚಿವ ಮತ್ತು ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಮತ್ತು ಅವರ ಪತ್ನಿ ನವಜೋತ್‌ ಕೌರ್‌ ಸಿಧು ಅವರಿಗೆ ಅಮೃತಸರ ರೈಲು ದುರಂತದ ಪ್ರಕರಣದಲ್ಲಿ  ಇಂದು ಗುರುವಾರ ಕ್ಲೀನ್‌ ಚಿಟ್‌ ನೀಡಲಾಯಿತು.

ಕಳೆದ ಅಕ್ಟೋಬರ್‌ 19ರಂದು ಈ ರೈಲು ದುರಂತ ಸಂಭವಿಸಿತ್ತು, 60 ಮಂದಿ ಮೃತಪಟ್ಟು ಇತರ 70 ಮಂದಿ ಗಾಯಗೊಂಡಿದ್ದರು. ಅಂದು ಜನರು ರೈಲು ಹಳಿಯ ಮೇಲೆ ನಿಂತು ರಾವಣ ಪ್ರತಿಕೃತಿ ದಹನವನ್ನು ವೀಕ್ಷಿಸುತ್ತಿದ್ದರು. 

ರೈಲು ದುರಂತ ಘಟಿಸಿದ್ದ ವೇಳೆ ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ಕೂಡ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ದುರಂತದ ಬಗ್ಗೆ ಜಾಲಂಧರ ವಿಭಾಗೀಯ ಆಯುಕ್ತ ಬಿ ಪುರುಷಾರ್ಥ ಅವರಿಂದ ನ್ಯಾಯಾಂಗ ತನಿಖೆ ನಡೆದಿತ್ತು. 

ಇವರ 300 ಪುಟಗಳ ತನಿಖಾ ವರದಿಯಲ್ಲಿ ಸಿಧು ಮತ್ತು ಅವರ ಪತ್ನಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ. 


Trending videos

Back to Top