CONNECT WITH US  

ವಿದ್ಯಾರ್ಥಿಗಳೇ, ಕಾಂಗ್ರೆಸ್‌ ಪಕ್ಷ ನಿಮಗಾಗಿ : ರಾಹುಲ್‌ ಗಾಂಧಿ ಪತ್ರ

ಹೊಸದಿಲ್ಲಿ : "ವಿದ್ಯಾರ್ಥಿಗಳೇ, ನಿಮಗೆ ಉದ್ಯೋಗಾವಕಾಶಗಳೊಂದಿಗೆ ನೇರ ಸಂಪರ್ಕ ಕಲ್ಪಿಸಲು ಮತ್ತು ನಿಮ್ಮನ್ನೀಗ ಹಿಂದಕ್ಕೆ ಎಳೆದು ಹಿಡಿದಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಏನೆಲ್ಲ ಸಾಧ್ಯವೋ ಅವೆಲ್ಲನವನ್ನೂ ಕಾಂಗ್ರೆಸ್‌ ಪಕ್ಷ ನಿಮಗಾಗಿ ಮಾಡಲಿದೆ' ಎಂದು ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಬರೆದಿರುವ ಪತ್ರದಲ್ಲಿ ಭರವಸೆ ನೀಡಿದ್ದಾರೆ. 

"ವಿದ್ಯಾರ್ಥಿಗಳೆ ನೀವು ರಾಷ್ಟ್ರ ನಿರ್ಮಾಪಕರು; ನೀವು ಸಾಗಬೇಕಿರುವುದು ಯುದ್ಧದೆಡೆಗೆ ಅಲ್ಲ; ಅಭಿವೃದ್ಧಿಯ ಕಡೆಗೆ, ವಿಜ್ಞಾನ ತಂತ್ರಜ್ಞಾನ, ಕಲೆ, ಸಾಹಿತ್ಯಗಳ ಮುನ್ನಡೆಯ ಕಡೆಗೆ' ಎಂದು ರಾಹುಲ್‌ ಹೇಳಿದ್ದಾರೆ. 

ರಾಹುಲ್‌ ಗಾಂಧಿ ಬರೆದಿರುವ ಈ ಪತ್ರವನ್ನು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ. ಎನ್‌ಎಸ್‌ಯುಐ ಇದನ್ನು ದೇಶಾದ್ಯಂತದ ಕಾಲೇಜುಗಳಲ್ಲಿ ವಿತರಿಸುತ್ತಿದೆ. "ಬೆಹತರ್‌ ಭಾರತ್‌' ಅಭಿಯಾನದಡಿ ಈ ಕಲಸ ನಡೆಯುತ್ತಿದೆ ಎಂದು ಪಕ್ಷ ಹೇಳಿದೆ. 


Trending videos

Back to Top