CONNECT WITH US  

ತೆಲಂಗಾಣ ಜನಾದೇಶ ನಮಗೇ : ಕಾಂಗ್ರೆಸ್‌, ಟಿಆರ್‌ಎಸ್‌ ವಿಶ್ವಾಸ

ಹೈದರಾಬಾದ್‌ : 119 ಸದಸ್ಯಬಲದ ತೆಲಂಗಾಣ ವಿಧಾನ ಸಭೆಗೆ ನಾಳೆ ಶುಕ್ರವಾರ ನಡೆಯಲಿರುವ ಚುನಾವಾಣೆಯಲ್ಲಿ  ತಾವೇ ಜಯ ಗಳಿಸುವುದಾಗಿ ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಮೈತ್ರಿ ಕೂಟ ಹೇಳಿಕೊಂಡಿವೆ. 

ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಏಕಾಂಗಿ ಹೋರಾಟ ನೀಡುತ್ತಿರುವ ಬಿಜೆಪಿ, ಈ ಬಾರಿ  ತ್ರಿಕೋನ ಸ್ಪರ್ಧೆಯೇ ಮುಖ್ಯವಾಗಿರುತ್ತದೆ ಎಂದು ಹೇಳಿದೆ. 

'ನಮಗೆ ಪ್ರಚಂಡ ಬಹುಮತದ ವಿಜಯ ದೊರಕುತ್ತದೆ' ಎಂದು ಟಿಆರ್‌ಎಸ್‌ ನ ಲೋಕಸಭಾ ಉಪ ನಾಯಕ ಬಿ ವಿನೋದ್‌ ಕುಮಾರ್‌ ಹೇಳಿದ್ದಾರೆ. ಟಿಆರ್‌ಎಸ್‌ 2ನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರುವ ವಿಶ್ವಾಸ ಹೊಂದಿದೆ. 


Trending videos

Back to Top