ಸಾಲ ಮನ್ನಾ: ಕೇಂದ್ರದಿಂದ ವಿವೇಕದ ನಡೆ ಅವಶ್ಯ


Team Udayavani, Dec 14, 2018, 6:00 AM IST

d-106.jpg

ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಯಾವೊಂದೂ ರಾಜ್ಯದಲ್ಲಿಯೂ ಅಧಿಕಾರ ಪಡೆಯುವಲ್ಲಿ ಯಶಸ್ವಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ಬಗೆಗಿನ ತನ್ನ ಕಾರ್ಯತಂತ್ರ ಬದಲಾಯಿಸುವ ಅನಿವಾರ್ಯತೆಯಲ್ಲಿದೆ. ತನ್ನ ಭದ್ರ ನೆಲೆ ಎಂದೇ ಪರಿಗಣಿಸಿದ್ದ ಹಿಂದಿ ಭಾಷೆಯ ಪ್ರಾಬಲ್ಯದ ರಾಜ್ಯಗಳಲ್ಲಿ ವಿಫ‌ಲವಾದದ್ದು ಸಹಜವಾಗಿಯೇ ಬಿಜೆಪಿಗೆ ದಿಗಿಲು ಹುಟ್ಟಿಸಿದೆ. ಮೇಲ್ನೋಟಕ್ಕೆ ಇದು ಆಡಳಿತ ವಿರೋಧಿ ಅಲೆ ಮತ್ತು ಆಯಾ ರಾಜ್ಯಗಳಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಪರಿಣಾಮ ಎಂದು ವ್ಯಾಖ್ಯಾನಿಸಬಹುದು. ಇದು ತೇಪೆಯಷ್ಟೇ. ವಾಸ್ತವವಾಗಿ ಫ‌ಲಿತಾಂಶ ಬಿಜೆಪಿ ನಾಯಕರ ನಿದ್ದೆಗೆಡಿಸಿ ರುವುದು ಸ್ಪಷ್ಟ. ಹಲವು ವಿಶಿಷ್ಟ ಯೋಜನೆಗಳ ಮೂಲಕ ಮೋದಿ ನೇತೃತ್ವದ ಸರಕಾರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರಬಹುದು. ಆದರೆ ರೈತರು, ಕಾರ್ಮಿಕರು, ಮಧ್ಯಮ ವರ್ಗಗಳಿಗೆ ಸರಕಾರದ ಕಾರ್ಯವೈಖರಿ ಸಂಪೂರ್ಣ ತೃಪ್ತಿ ತಂದಿಲ್ಲ ಎಂಬುದಕ್ಕೆ ಈಗಿನ ಫ‌ಲಿತಾಂಶ ನಿದರ್ಶನ. ಹೀಗಾಗಿ ದೀರ್ಘಾವಧಿಯಲ್ಲಿ ಪರಿಣಾಮ ಬೀರುವ ಯೋಜನೆಗಳ ಜತೆಗೇ ಜನಪ್ರಿಯ ಯೋಜನೆ ಗಳತ್ತ ಚಿಂತನೆ ಆರಂಭಿಸಿದೆ. ಸಾಲ ಮನ್ನಾ, ಮಹಿಳಾ ಪರ ಯೋಜನೆಗಳಂಥ ಕ್ಷಿಪ್ರ ಅವಧಿಯಲ್ಲಿ ಜನರಿಗೆ ನೇರ ಲಾಭ ಸಿಗುವ ಯೋಜನೆಗಳತ್ತ ಕಣ್ಣು ಹಾಯಿಸಿದೆ. 

ದೇಶದ ರೈತರ ಬದುಕು ಇನ್ನೂ ಹಸನಾಗಿಲ್ಲ. ಆಡಳಿತಾರೂಢ ಸರಕಾರಗಳು ಸಾಲ ಮನ್ನಾ ಸಹಿತ ಹಲವು ತಾತ್ಕಾಲಿಕ ಪರಿಹಾರಕ್ಕೆ ಮುಂದಾಗುತ್ತಿವೆ,ಶಾಶ್ವತ ಪರಿಹಾರ ಕ್ರಮಗಳತ್ತ ಅಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲೂ ಪಕ್ಷಗಳು ಸಾಲ ಮನ್ನಾ ವಿಚಾರವನ್ನು ಪ್ರಸ್ತಾಪಿಸುತ್ತವೆ. ಪಕ್ಷಗಳಿಗೆ ಮತದಾರರನ್ನು ಸೆಳೆಯಲು ಇದೊಂದು ಅಸ್ತ್ರವಷ್ಟೇ. ಇದಕ್ಕೆ ಬಿಜೆಪಿಯೂ ಹೊರತಾಗಿಲ್ಲ. ಈ ಬಾರಿ ಪ್ರಧಾನಿ ಮೋದಿ ಅವರು ಸಾಲ ಮನ್ನಾ ಸಾಧ್ಯವೇ ಇಲ್ಲ ಎಂದಿದ್ದರು. ಅದರ ಬದಲಿಗೆ ಶಾಶ್ವತ ಪರಿಹಾರ ಕಲ್ಪಿಸಬಹುದಾದ ಫ‌ಸಲ್‌ ಬಿಮಾ ಯೋಜನೆ, 2022ರ ವೇಳೆಗೆ ಕೃಷಿಕರ ಆದಾಯ ದುಪ್ಪಟ್ಟುಗೊಳಿಸುವುದು, ಹೊಸ ರಫ್ತು ನೀತಿ-ಸಹಿತ ಹಲವು ಯೋಜನೆಗಳನ್ನು ಘೋಷಿಸಿದ್ದರೂ ರೈತರ ಸಂಕಷ್ಟ ದೂರವಾಗಿಲ್ಲ. ಇದುವೇ ಪಂಚ ರಾಜ್ಯ ಚುನಾವಣೆ ಮೇಲೆ ಪರಿಣಾಮ ಬೀರಿತು ಎಂಬುದು ವಿಶ್ಲೇಷಣೆಯ ಸಾರ. ಈಗ ಬಿಜೆಪಿಯೂ ರೈತರ ಸಾಲ ಮನ್ನಾದತ್ತ ಯೋಚಿಸುತ್ತಿದೆ. ಅಂದಾಜಿನ ಪ್ರಕಾರ, ಕೃಷಿಯನ್ನೇ ಅವಲಂಬಿಸಿದ ಕುಟುಂಬಗಳಲ್ಲಿನ ಮತದಾರರ ಸಂಖ್ಯೆ 50 ಕೋಟಿ. ಇಷ್ಟೊಂದು ದೊಡ್ಡ ಸಂಖ್ಯೆಯ ಮತದಾರರನ್ನು ಸೆಳೆಯಲು ತಂತ್ರ ರೂಪಿಸುತ್ತಿದೆ. ಸಾಲ ಮನ್ನಾ ಯೋಜನೆ ಅನುಷ್ಠಾನಗೊಂಡಲ್ಲಿ ಅಂದಾಜು 26 ಕೋಟಿ ರೈತರ 4 ಲಕ್ಷ ಕೋ. ರೂ. ಸಾಲ ಮನ್ನಾವಾಗಲಿದೆ. ಇದರಿಂದ ಈಗಾಗಲೇ 10.5 ಲ. ಕೋ. ರೂ. ಗಳಷ್ಟು ಸಾಲ ಬಾಕಿಯನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳು ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಬಹುದು. ಜತೆಗೆ ಇದಕ್ಕಾಗಿ ಆರ್‌ಬಿಐನ ಮೀಸಲು ನಿಧಿ ಬಳಸಿದರೆ ದೇಶದ ಆರ್ಥಿಕತೆಗೂ ಸಂಕಷ್ಟ ಎದುರಾಗ ಬಹುದು. ಈ ಹಣಕಾಸು ವರ್ಷದಲ್ಲಿ ದೇಶದ ಒಟ್ಟಾರೆ ಜಿಡಿಪಿ 6. 24 ಲ. ಕೋ. ರೂ. ಗಳೆಂದಿದ್ದು, ವಿತ್ತೀಯ ಕೊರತೆ 6.67 ಲ. ಕೋ. ರೂ. ನಷ್ಟಿದೆ. ಜಿಡಿಪಿಗೆ ಹೋಲಿಸಿದರೆ ವಿತ್ತೀಯ ಕೊರತೆ ಪ್ರಮಾಣ ಶೇ. 3.5 ರಷ್ಟು ಹೆಚ್ಚಿದ್ದು, ಇದನ್ನು ಶೇ. 3.3ಕ್ಕೆ ನಿಲ್ಲಿಸಲು ಸರಕಾರ ಪರದಾಡುತ್ತಿದೆ. ಇಂಥ ಸಂದರ್ಭದಲ್ಲಿ ರೈತರ ಸಾಲ ಮನ್ನಾ ನಿರ್ಧಾರ ಹೊಸ ಸಮಸ್ಯೆ ಸೃಷ್ಟಿಸೀತು ಎಂಬುದು ಆರ್ಥಿಕ ತಜ್ಞರ ಆತಂಕ. ರಾಜಕೀಯ ಪಕ್ಷಗಳು ಚುನಾವಣಾ ಕಾರ್ಯತಂತ್ರ ಬದಲಾಯಿಸುವುದರಲ್ಲಿ ತಪ್ಪಿಲ್ಲ. ರೈತರ ಸಂಕಷ್ಟಗಳಿಗೆ ಸ್ಪಂದಿಸುವುದೂ ಇಂದಿನ ತುರ್ತು ಅಗತ್ಯವೂ ಹೌದು. ಆದರೆ ದೇಶದ ಆರ್ಥಿಕತೆಯನ್ನು ಸಂಕಷ್ಟಕ್ಕೆ ಸಿಲುಕಿಸದೇ ಹಣದ ಕ್ರೋಢೀಕರಣಕ್ಕೆ ಕೇಂದ್ರ ಸರಕಾರ ಪರ್ಯಾಯ ಮಾರ್ಗವನ್ನೂ ಹುಡುಕುವುದು ಒಳಿತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.