ಮಾಜಿ ಪ್ರಧಾನಿ ಎಚ್ಡಿಡಿಗೆ ವಿಡಿಯೋ ಮೂಲಕ ಟಾಂಗ್ ನೀಡಿದ ಸಿಂಹ!
Team Udayavani, Dec 18, 2018, 11:54 AM IST
ಮೈಸೂರು: ಸಂಸದ ಪ್ರತಾಪ್ ಸಿಂಹ ವೈರಲ್ ವಿಡಿಯೋವೊಂದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಕಮಲ್ನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡಿರುವ ವಿಡಿಯೋ ಪೋಸ್ಟ್ ಮಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕೆಲ ವಿಚಾರವಾದಿಗಳಿಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಪ್ರತಾಪ್ ಸಿಂಹ ಪೋಸ್ಟ್ನಲ್ಲೇನಿದೆ?
ಕಮಲ್ನಾಥ್ ಮತ್ತು ಸಿಂಧಿಯಾ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್! ಮೋದಿ ಗೆದ್ದರೆ ನಾ ಅಲ್ಲಿಗೆ ಹೋಗ್ತೇನೆ, ಇಲ್ಲಿಗೆ ಹೋಗ್ತೇನೆ, ಹಾಗಾಗುತ್ತೆ, ಹೀಗಾಗುತ್ತೆ ಅನ್ನೋರಿಗೆ ಸಾರ್ವಜನಿಕ ಜೀವನದಲ್ಲಿ ಹೇಗೆ ಸೌಜನ್ಯದಿಂದ ನಡೆದುಕೊಳ್ಳಬಹುದು ಎಂಬುದಕ್ಕೊಂದು ಮೇಲ್ಪಂಕ್ತಿ!
ಎಚ್ಡಿಡಿ ಈ ಹಿಂದೆ ಮೋದಿ ಪ್ರಧಾನ ಮಂತ್ರಿ ಆದರೆ ನಾನು ಕರ್ನಾಟಕ ತೊರೆಯುತ್ತೇನೆ ಎಂದಿದ್ದರು.
ಇತ್ತೀಚೆಗೆ ಕೊಡಗಿನಲ್ಲಿ ವೇದಿಕೆಯಲ್ಲೇ ಎಚ್.ಡಿ ಕುಮಾರಸ್ವಾಮಿ ಅವರು ಪ್ರತಾಪ್ ಸಿಂಹ ಅವರ ಭಾಷಣದ ವಿರುದ್ಧ ಕಿಡಿಯಾಗಿದ್ದರು. ಪರಿಹಾರ ಧನದ ವಿಚಾರದಲ್ಲಿ ಅಪ್ಪ ಯಾರು, ಅಮ್ಮ ಯಾರು ಎನ್ನುವ ಮಟ್ಟಿಗೆ ತಲುಪಿತ್ತು.ಸಿಎಂ ವೇದಿಕೆಯಲ್ಲೇ ಭಾಷಣ ನಿಲ್ಲಿಸಿ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್