ರಜನಿ ಹೆಸರಲ್ಲಿ ವಾಹಿನಿ?
Team Udayavani, Dec 22, 2018, 8:35 AM IST
ಚೆನ್ನೈ: ರಾಜಕೀಯ ಪಕ್ಷ ಸ್ಥಾಪಿಸುವ ಇರಾದೆಯೊಂದಿಗೆ ಸೂಪರ್ ಸ್ಟಾರ್ ರಜನೀಕಾಂತ್ ಆರಂಭಿಸಿರುವ ರಜನಿ ಮಕ್ಕಳ್ ಮಂದ್ರಂ ಎಂಬ ಅಭಿಮಾನಿಗಳ ಸಂಘ ತನ್ನದೇ ಒಂದು ಸ್ವಂತ ಟಿವಿ ವಾಹಿನಿಯನ್ನು ಆರಂಭಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಸೂಪರ್ಸ್ಟಾರ್ ಟಿವಿ, ರಜನಿ ಟಿವಿ, ತಲೈವರ್ ಟಿವಿ ಎಂಬ ಮೂರು ಹೆಸರುಗಳನ್ನು ಪ್ರಸ್ತಾಪ ಮಾಡಲಾಗಿದೆ.
ಈ ಮೂರೂ ಶೀರ್ಷಿಕೆಗಳಿಗೂ ಪ್ರತ್ಯೇಕ ಲೋಗೋ ತಯಾರಿಸಲಾಗಿದ್ದು ಅದರಲ್ಲಿ ರಜನಿ ಭಾವಚಿತ್ರ ಹಾಗೂ ಹೆಸರನ್ನು ಉಪಯೋಗಿಸಲಾಗಿದೆ. ಈ ಕುರಿತಂತೆ, ಟ್ರೇಡ್ ಮಾರ್ಕ್ಗಳ ಮುಖ್ಯಸ್ಥರಿಗೆ ಪತ್ರವೊಂದನ್ನು ಬರೆದಿರುವ ರಜನಿಕಾಂತ್, ಟಿವಿ ವಾಹಿನಿಯ ಲೋಗೋಗಳಲ್ಲಿ ತಮ್ಮ ಹೆಸರು ಹಾಗೂ ಭಾವಚಿತ್ರ ಬಳಕೆಗೆ ತಮ್ಮ ಆಕ್ಷೇಪವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.