ಕದ್ದ ಕಾರಲ್ಲಿ ಸಿಕ್ಕಿಕೊಂಡು ಪೊಲೀಸರನ್ನೇ ಕರೆದ!
Team Udayavani, Dec 28, 2018, 5:57 AM IST
ನಾರ್ವೆ ದೇಶದ ಹರೆಯದ ಹುಡುಗನೊಬ್ಬ ಕಾರಿನ ಒಳಗೆ ಹೋಗುತ್ತಲೇ ಕಾರು ಲಾಕ್ ಆಗಿ, ತನ್ನನ್ನು ರಕ್ಷಿಸಲು ಆತ ಪೊಲೀಸರಿಗೆ ಕರೆ ಮಾಡಿದ್ದ. ಇದರಲ್ಲಿ ವಿಶೇಷವೇನಿದೆ?ತುರ್ತು ಸಂದರ್ಭದಲ್ಲಿ ಎಲ್ಲರೂ ಪೊಲೀಸರಿಗೇ ಕರೆ ಮಾಡುವುದು. ಹುಡುಗ ಕೂಡ ಅದನ್ನೇ ಮಾಡಿದ್ದಾನೆ ಎಂದು ನೀವು ಕೇಳುತ್ತೀರಿ ಅಲ್ಲವೇ. ಆದರೆ ಇದರಲ್ಲಿ ವಿಶೇಷವಿದೆ. ಹುಡುಗ ಸಿಕ್ಕಿಕೊಂಡ ಕಾರನ್ನು ಆತ ಕದಿಯಲು ಹೋಗಿದ್ದ. ಕದ್ದು ಪರಾರಿಯಾಗಬೇಕಿದ್ದವ ತಾನೇ ಪೊಲೀಸರಿಗೆ ಕರೆ ಮಾಡಿ ತನ್ನ ಸುಳಿವನ್ನು ಬಿಟ್ಟುಕೊಡುವಂತಾಯಿತು. ಪೊಲೀಸರು ಆತನನ್ನು ಕಾರಿನಿಂದ ಪಾರು ಮಾಡಿ, ಬಂಧಿಸಿ ನೇರವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರಂತೆ. “ಅವನಿಗೆ ನಮ್ಮ ಪರಿಚಯ ಮೊದಲೇ ಇತ್ತಂತೆ. ಹಾಗಾಗಿ ನಮ್ಮನ್ನು ಸಹಾಯಕ್ಕೆ ಕರೆದನಂತೆ. ಸ್ನೇಹಿತರನ್ನು ಕರೆದಂತೆ ಆತ ನಮ್ಮನ್ನು ಕರೆದಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.
ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಮಾಡುವ ಸಂಸ್ಥೆಗಾಗಿ ಆತ ಕಾರು ಕದಿಯಲು ಬಂದಿದ್ದನಂತೆ. ಆತ ಕಾರು
ಕದಿಯುವ ಮೊದಲೇ ಬಂಧನಕ್ಕೀಡಾದ ಕಾರಣ ಶಿಕ್ಷೆಯಿಂದ ಪಾರಾದ ಎಂದು ಕೂಡ ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?