CONNECT WITH US  

ಬಾಂಗ್ಲಾದಲ್ಲಿ ಶೇಖ್ ಹಸೀನಾಗೆ ಜಯಭೇರಿ, ಹಿಂಸಾಚಾರಕ್ಕೆ 17 ಬಲಿ

ಶೇಖ್  ನಾಲ್ಕನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಿದಂತಾಗಿದೆ...

ಢಾಕಾ:ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಶೇಖ್  ಹಸೀನಾ ನೇತೃತ್ವದ ಅವಾಮಿ ಲೀಗ್ ಮೈತ್ರಿಕೂಟ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಶೇಖ್  ನಾಲ್ಕನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಿದಂತಾಗಿದೆ. ಚುನಾವಣೆಯಲ್ಲಿ ನಕಲಿ ಮತದಾನ ನಡೆಸಲಾಗಿದೆ, ಮರು ಚುನಾವಣೆ ನಡೆಸಬೇಕೆಂದು ವಿಪಕ್ಷಗಳು ಆಗ್ರಹಿಸಿ ನಡೆಸಿದ ಹಿಂಸಾಚಾರದಲ್ಲಿ 17 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

300 ಸದಸ್ಯ ಬಲದ ಸಂಸತ್ ನಲ್ಲಿ ಆಡಳಿತಾರೂಢಾ ಶೇಖ್ ಹಸೀನಾ ಅವಾಮಿ ಲೀಗ್ ಪಕ್ಷ ಮತ್ತು ಮೈತ್ರಿಕೂಟ 288 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷ ಕೇವಲ ಆರು ಸ್ಥಾನಗಳಲ್ಲಿ ಜಯ ಸಾಧಿಸಿದೆ ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಹೇಲಾಲ್ ಉದ್ದೀನ್ ಅಹ್ಮದ್ ತಿಳಿಸಿದ್ದಾರೆ.

2014ರ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸಿದ್ದ ಬಾಂಗ್ಲಾದೇಶ್ ನ್ಯಾಶನಲಿಷ್ಟ್ ಪಾರ್ಟಿ ಧೂಳೀಪಟವಾಗಿದೆ. ಏತನ್ಮಧ್ಯೆ ಬಾಂಗ್ಲಾದೇಶದಲ್ಲಿ ಮತ್ತೆ ಚುನಾವಣೆ ನಡೆಸಬೇಕೆಂದು ನ್ಯಾಶನಲ್ ಯೂನಿಟಿ ಫ್ರಂಟ್ ನೇತೃತ್ವದ ಬಿಎನ್ ಪಿ ಮೈತ್ರಿಕೂಟದ ಮುಖಂಡ ಕಮಲ್ ಹುಸೈನ್ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

Trending videos

Back to Top