ಜಿಎಸ್ಟಿ ತಪ್ಪಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ನಿರ್ಧಾರ
Team Udayavani, Jan 6, 2019, 12:30 AM IST
ಹೊಸದಿಲ್ಲಿ: ಜಿಎಸ್ಟಿ ಪಾವತಿ ಮಾಡುತ್ತಿರುವವರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗುತ್ತಿರುವುದರಿಂದಾಗಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅಷ್ಟೇ ಅಲ್ಲ, ತೆರಿಗೆ ಪಾವತಿ ಮಾಡದೇ ಇರುವವರನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನೂ ಸರ್ಕಾರ ಆರಂಭಿಸಿದೆ. ಅಂಥ ತೆರಿಗೆದಾರರ ಮಳಿಗೆಗಳ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಲು ಅಧಿಕಾರಿಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಕಳೆದ 12 ತಿಂಗಳಲ್ಲಿ ತೆರಿಗೆ ಪಾವತಿ ಮಾಡದೇ ಇರುವವರ ಸಂಖ್ಯೆ ಶೇ.28ಕ್ಕೇರಿದ್ದು, 2017ರಲ್ಲಿ ಇದು ಶೇ. 10ರಷ್ಟಿತ್ತು. ಇನ್ನೊಂದೆಡೆ, ಒಟ್ಟು ಜಿಎಸ್ಟಿ ಸಂಗ್ರಹದ ಪ್ರಮಾಣವೂ ಇಳಿಕೆಯಾಗಿದ್ದು, 13,48,000 ಕೋಟಿ ರೂ. ಸಂಗ್ರಹದ ಗುರಿ ತಲುಪುವ ಸಾಧ್ಯತೆ ಕಡಿಮೆ ಇದೆ. ಸುಮಾರು 1 ಲಕ್ಷ ಕೋಟಿ ರೂ. ಸಂಗ್ರಹ ಕೊರತೆ ನಿರೀಕ್ಷಿಸಲಾಗಿದೆ.