CONNECT WITH US  

ಬುಡಕಟ್ಟು ಸಂಘಟನೆಗಳಿಂದ 12 ತಾಸುಗಳ ಅಸ್ಸಾಂ ಬಂದ್‌, ರಸ್ತೆ ತಡೆ

ಗುವಾಹಟಿ : ಬುಡಕಟ್ಟು ಸಂಘಟನೆಗಳ ಸಮೂಹ ಇಂದು ಶುಕ್ರವಾರ 12 ತಾಸುಗಳ ಅಸ್ಸಾಂ ಬಂದ್‌ ಕರೆ ನೀಡಿದ್ದು  ಪ್ರತಿಭಟನಕಾರರು ಮೋಟಾರು ವಾಹನಗಳು ಬೋಡೋಲ್ಯಾಂಡ್‌ ಪ್ರವೇಶಿಸುವುದನ್ನು ತಡೆಯಲು ರಸ್ತೆಯಲ್ಲಿ ಟೈರ್‌ಗಳನ್ನು ಸುಡುತ್ತಿದ್ದಾರೆ; ಅನೇಕ ಕಡೆಗಳಲ್ಲಿ  ಮರದ ದಿಮ್ಮಿಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿದ್ದಾರೆ.

ರಾಜ್ಯದಲ್ಲಿನ ಆರು ಜನಾಂಗೀಯ ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ ನೀಡುವ ಮಸೂದೆಯನ್ನು ಪ್ರತಿಭಟಿಸುವ ಸಲುವಾಗಿ ಅಸ್ಸಾಂ ಬುಡಕಟ್ಟು ಸಂಘಟನೆಗಳ ಸಂಚಾಲನಾ ಸಮಿತಿಯು ಹನ್ನೆರಡು ತಾಸುಗಳ ಅಸ್ಸಾಂ ಬಂದ್‌ ಗೆ ಕರೆ ನೀಡಿದೆ.

ಬೋಡೋಲ್ಯಾಂಡ್‌ ಪ್ರದೇಶದಲ್ಲಿ  ಬಂದ್‌ ಬಹುತೇಕ ಸಂಪೂರ್ಣವಾಗಿದೆ. ಕೊಕ್ರಝಾರ್‌, ಉದಾಲ್‌ಗ‌ುರಿ, ಬಾಕ್ಸಾ ಮತ್ತು ಚಿರಾಂಗ್‌, ಬೊಂಗೈಗಾಂವ್‌ ಮಾತ್ರವಲ್ಲದೆ  ಬುಡಕಟ್ಟು ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಾದ ಮೋರಿಗಾಂವ್‌, ನಗಾಂವ್‌, ಹೊಜಾಯ್‌, ದೀಮಾ ಹಸಾವೋ ಮತ್ತು ಕಾರ್ಬಿ ಆಂಗ್‌ಲಾಂಗ್‌ ಜಿಲ್ಲೆಗಳಲ್ಲಿ ಬಂದ್‌ ಜೋರಾಗಿ ನಡೆಯುತ್ತಿದೆ. 

Trending videos

Back to Top