ಟ್ರಂಪ್ – ಕಿಂ ಸಭೆ ಸಾಧ್ಯವಾದರೆ ಸಾರ್ಕ್ ಏಕೆ ಅಸಾಧ್ಯ ? ನೇಪಾಲ
Team Udayavani, Jan 11, 2019, 6:36 AM IST
ಹೊಸದಿಲ್ಲಿ : ಟ್ರಂಪ್ ಮತ್ತು ಕಿಂ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸುತ್ತಾರಾದರೆ, ಈಗ ನಿಂತುಹೋಗಿರುವ ಸಾಕ್ ಶೃಂಗ ಸಭೆ ಮತ್ತೆ ಏಕೆ ಆರಂಭವಾಗಬಾರದು ಎಂದು ನೇಪಾಲ ಪ್ರಶ್ನಿಸಿದೆ.
ಸಾರ್ಕ್ ಶೃಂಗವನ್ನು ಮತ್ತೆ ಪುನರಾರಂಭಿಸಬೇಕೆಂದು ಬಲವಾಗಿ ಆಗ್ರಹಿಸಿರುವ ನೇಪಾಲ, ಸದಸ್ಯ ರಾಷ್ಟ್ರಗಳು ತಮ್ಮೊಳಗಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ನಿವಾರಿಸಿಕೊಳ್ಳಬೇಕು; ಸಾರ್ಕ್ ಸಮೂಹದ ದೇಶಗಳು ಸಂಘಟಿತರಾಗಿ ಭಯೋತ್ಪಾದನೆಯನ್ನು ಎದುರಿಸುವ ಸಂಕಲ್ಪ ತಳೆಯಬೇಕು ಮತ್ತು ಪ್ರಮುಖ ಪ್ರಾದೇಶಿಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಮಾರ್ಗೋಪಾಯಗಳನ್ನು ಕಂಡು ಕೊಳ್ಳಬೇಕು ಎಂದು ಹೇಳಿದೆ.
ನೇಪಾಲಿ ವಿದೇಶ ಸಚಿವ ಪ್ರದೀಪ್ ಕುಮಾರ್ ಗ್ಯಾವಳಿ ಅವರು ಕಳೆದ ವರ್ಷ ಸಿಂಗಾಪುರದಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಂ ಜೋಂಗ್ ಉನ್ ಅವರೊಳಗಿನ ಐತಿಹಾಸಿಕ ಮಾತುಕತೆಯನ್ನು ಮುಕ್ತ ಪ್ರಶಂಸೆಯೊಂದಿಗೆ ಉಲ್ಲೇಖೀಸಿದರಲ್ಲದೆ, ಸಾರ್ಕ್ ಸಮೂಹದ ಸದಸ್ಯ ರಾಷ್ಟ್ರಗಳು ತಮ್ಮೊಳಗಿನ ಯಾವತ್ತೂ ಭಿನ್ನಮತ, ಸಮಸ್ಯೆಗಳನ್ನು ಮಾತುಕತೆಯಿಂದ ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ
Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ
Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ
Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ