CONNECT WITH US  

ಮೋದಿ ವಾಜಪೆಯಿಯಂತಲ್ಲ:ಬಿಜೆಪಿ ಜೊತೆ ಮೈತ್ರಿ ಪ್ರಶ್ನೆಯೇ ಇಲ್ಲ 

ತಮಿಳುನಾಡಿನಲ್ಲಿ ಮೈತ್ರಿಗೆ ಬಿಜೆಪಿ ಬಾಗಿಲು ತೆರೆದಿದೆ ಎಂದಿದ್ದ ಪ್ರಧಾನಿಗೆ ಎಂ.ಕೆ.ಸ್ಟಾಲಿನ್‌ ತಿರುಗೇಟು 

ಚೆನ್ನೈ: ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ  ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ. 

ತಮಿಳುನಾಡಿನಲ್ಲಿ ಮೈತ್ರಿಗೆ ಬಿಜೆಪಿ ಬಾಗಿಲು ತೆರೆದಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ ಸ್ಟಾಲಿನ್‌ ಈ ಹೇಳಿಕೆ ನೀಡಿದ್ದಾರೆ. 

ರಾಹುಲ್‌ ಗಾಂಧಿ ಅವರ ಹೆಸರನ್ನು ಪ್ರಧಾನಮಂತ್ರಿ ಹುದ್ದೆಗೆ ಮತ್ತೂಮ್ಮೆ ಸ್ಟಾಲಿನ್‌ ಬೆಂಬಲಿಸಿದರು. 

ಬಿಜೆಪಿಯೊಂದಿಗೆ ಈಗ ಮೈತ್ರಿ ಮಾಡಿಕೊಂಡರೆ ಅದು ಆರೋಗ್ಯಕರವಾದ ಮೈತ್ರಿಯಾಗವುದಿಲ್ಲ . ಪ್ರಧಾನಿ ಮೋದಿ ತಮ್ಮನ್ನು ತಾವೇ ವಾಜಪೇಯಿ ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

Trending videos

Back to Top