CONNECT WITH US  

ಉ.ಪ್ರ: ನಾಪತ್ತೆಯಾಗಿದ್ದ ಆರ್‌ಟಿಐ ಕಾರ್ಯಕರ್ತನ ಶವ ಪತ್ತೆ; ಕೊಲೆ

ಮುಜಫ‌ರನಗರ : ಕಳೆದ ಡಿ.27ರಿಂದ ನಾಪತ್ತೆಯಾಗಿದ್ದ ಆರ್‌ಟಿಐ ಕಾರ್ಯಕರ್ತ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಂದ್ಲಾ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾಪುರ್‌ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ಇಂದು ಶುಕ್ರವಾರ ತಿಳಿಸಿದ್ದಾರೆ.

32ರ ಹರೆಯದ ಕಾಸಿಂ ಸೈಫಿ ಅವರು ಕಳೆದ ಡಿಸೆಂಬರ್‌ ಕೊನೇ ವಾರದಿಂದ ಮೊರಾದಾಬಾದ್‌ ನಲ್ಲಿನ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಾಪರ್ಟಿ ಡೀಲರ್‌ ವಿಕಾಸ್‌ ಚೌಧರಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ತೀವ್ರವಾಗಿ ಪ್ರಶ್ನಿಸಿದಾಗ ಆತ ತಾನು ಆರ್‌ಟಿಐ ಕಾರ್ಯಕರ್ತನನ್ನು ಕೊಂದದ್ದು ಹೌದೆಂದು ಒಪ್ಪಿಕೊಂಡ.

ವಿಕಾಸ್‌ ಚೌಧರಿ ಕಳೆದ ಡಿ.27ರಂದು ಕುಲದೀಪ್‌ ಎಂಬಾತನ ಸಹಾಯ ಪಡೆದು ಸೈಫಿಯನ್ನು ಗುಂಡಿಕ್ಕಿ ಕೊಂದಿದ್ದ. ಹಳೇ ದ್ವೇಷದಲ್ಲಿ ಈ ಕೊಲೆ ನಡೆದಿತ್ತು. ಸೈಫಿ ಕುಟುಂಬದವರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಆ ಪ್ರಕಾರ ಪೊಲೀಸರು ತನಿಖೆ ನಡೆಸಿ ಕೊಲೆಗಾರರನ್ನು ಪತ್ತೆ ಹಚ್ಚಿದ್ದರು ಎಂದು ಪೊಲೀಸ್‌ ಅಧಿಕಾರಿ ಹೇಳಿದರು. 

Trending videos

Back to Top