ಗ್ರಾಹಕರಿಗೆ ಜಿಎಸ್ಟಿ ಹೊರೆ ಕಡಿಮೆ ಮಾಡಲು ನಿರ್ಧಾರ
Team Udayavani, Jan 14, 2019, 12:45 AM IST
ಹೊಸದಿಲ್ಲಿ: ಕಿರಾಣಿ ಅಂಗಡಿಗಳು ಮತ್ತು ಇತರ ಸಣ್ಣ ಪ್ರಮಾಣದ ಮಾಲ್ಗಳಲ್ಲಿ ಸಾಮಗ್ರಿಗಳನ್ನು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಜಿಎಸ್ಟಿ ವಿಧಿಸುವುದನ್ನು ತಪ್ಪಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ.
50 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಕಾಂಪೊಸಿ ಶನ್ ಡೀಲರ್ ಎಂದು ನೋಂದಾಯಿಸಿ ಕೊಂಡಿರುವ ವ್ಯಾಪಾರ ಸ್ಥರು ತಮ್ಮ ಗ್ರಾಹಕರಿಗೆ ಜಿಎಸ್ಟಿ ವಿಧಿಸಬಾರದು. ಅಷ್ಟೇ ಅಲ್ಲ, ತಮ್ಮ ಜಿಎಸ್ಟಿ ವಿವರವನ್ನು ಇನ್ವಾಯ್ಸನಲ್ಲಿ ಕಡ್ಡಾಯವಾಗಿ ನಮೂದಿಸಬೇಕಿರುತ್ತದೆ. ಸದ್ಯ ಗ್ರಾಹಕರಿಂದ ತೆರಿಗೆಯನ್ನು ಸಂಗ್ರಹಿಸುವ ವ್ಯಾಪಾರಸ್ಥರು ಅದನ್ನು ಸರಕಾರಕ್ಕೆ ಪಾವತಿ ಮಾಡುತ್ತಿಲ್ಲ. ಇದರೊಂದಿಗೆ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲೂ ಕಂದಾಯ ಇಲಾಖೆ ನಿರ್ಧರಿಸಿದೆ.
ಜಿಎಸ್ಟಿ ಕಾಂಪೊಸಿಶನ್ ಸ್ಕೀಮ್ ಅಡಿಯಲ್ಲಿ ವ್ಯಾಪಾರಿಗಳೂ ಆಗಿರುವ ಉತ್ಪಾದಕರು ಶೇ.1 ರಷ್ಟು ತೆರಿಗೆ ವಿಧಿಸಿದರೆ ಸಾಕು. ಅಷ್ಟೇ ಅಲ್ಲ, ಈ ಸಾಮಗ್ರಿಯನ್ನು ಖರೀದಿಸುವ ಗ್ರಾಹಕರಿಗೂ ಜಿಎಸ್ಟಿ ವಿಧಿಸುವಂತಿಲ್ಲ. ಸುಮಾರು 20 ಲಕ್ಷ ಡೀಲರುಗಳು ಕಾಂಪೊಸಿಶನ್ ಸ್ಕೀಮ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?