ಪ್ರಧಾನಿ ಮೋದಿಗೆ ಫಿಲಿಪ್ ಕೋಟ್ಲರ್ ಪ್ರಶಸ್ತಿ ಗೌರವ
Team Udayavani, Jan 15, 2019, 12:30 AM IST
ಹೊಸದಿಲ್ಲಿ: ಶ್ರೇಷ್ಠ ನಾಯಕತ್ವಕ್ಕಾಗಿ ನೀಡುವ ಫಿಲಿಪ್ ಕೋಟ್ಲರ್ ಪ್ರಸಿಡೆನ್ಶಿಯಲ್ ಅವಾರ್ಡ್ ಅನ್ನು ಪ್ರಧಾನಿ ನರೇಂದ್ರ ಮೋದಿ ಯವರಿಗೆ ಸೋಮವಾರ ಪ್ರದಾನ ಮಾಡಲಾ ಗಿದೆ. ಭಾರತಕ್ಕೆ ನೀಡಿದ ಶ್ರೇಷ್ಠ ನಾಯಕತ್ವಕ್ಕಾಗಿ ಮತ್ತು ಆಧಾರ್, ಆರ್ಥಿಕ ಒಳಗೊಳ್ಳುವಿಕೆ, ಡಿಜಿಟಲ್ ಇಂಡಿಯಾ ಕ್ಷೇತ್ರದಲ್ಲಿ ಅವರು ನೀಡಿದ ಗಣನೀಯ ಕೊಡುಗೆಗಾಗಿ ಈ ಗೌರವ ಪ್ರದಾನ ಮಾಡಲಾಗಿದೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆರ್ಥಿಕ, ಸಾಮಾಜಿಕ, ತಾಂತ್ರಿಕ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆಯನ್ನು ಕಂಡಿದೆ ಎಂದು ಪ್ರಶಸ್ತಿ ಪತ್ರದಲ್ಲಿ ಶ್ಲಾ ಸಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಹಣಕಾಸು ಸೇವೆಗಳ ಕ್ಷೇತ್ರದಲ್ಲಿಯೂ ದೇಶ ಗಣನೀಯ ಪ್ರಗತಿ ಸಾಧಿಸಿದೆ ಎಂದು ಉಲ್ಲೇಖೀಸಲಾಗಿದೆ.
ಆಧುನಿಕ ಮಾರುಕಟ್ಟೆ ವ್ಯವಹಾರದ ಪಿತಾಮಹ ಎಂದು ಹೆಗ್ಗಳಿಕೆಗೆ ಪಾತ್ರರಾಗಿರುವ ಫಿಲಿಪ್ ಕೋಟ್ಲರ್ ಹೆಸರಿನಲ್ಲಿ ಅಮೆರಿಕದ ಇಲಿನಾಯ್ಸನಲ್ಲಿರುವ ನಾರ್ತ್ ವೆಸ್ಟರ್ನ್ ವಿವಿ ಈ ಪ್ರಶಸ್ತಿ ಸ್ಥಾಪಿಸಿದೆ. “ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್’ ಸೇರಿದಂತೆ ಮಾರುಕಟ್ಟೆ ತಂತ್ರಜ್ಞಾನಗಳ ಬಗ್ಗೆ 60 ಪುಸ್ತಕಗಳನ್ನು ಕೋಟ್ಲರ್ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ