ಕೋಟ್ಲರ್‌ ಪ್ರಶಸ್ತಿಗೆ ರಾಹುಲ್‌ ವ್ಯಂಗ್ಯ; PMಗೆ ಕೋಟ್ಲರ್‌ ಅಭಿನಂದನೆ


Team Udayavani, Jan 16, 2019, 6:29 AM IST

pm-modi-kotler-award-700.jpg

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ  ‘ವಿಶ್ವವಿಖ್ಯಾತ ಫಿಲಿಪ್‌ ಕೋಟ್ಲರ್‌ ಅಧ್ಯಕ್ಷೀಯ ಪ್ರಶಸ್ತಿ’ ಗೆದ್ದಿರುವುದನ್ನು  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವ್ಯಂಗ್ಯದಿಂದ ಪ್ರಶಂಸಿಸಿ, ಪ್ರಶಸ್ತಿಯ ಸಾಚಾತನವನ್ನೇ ಪ್ರಶ್ನಿಸಿದ ಬೆನ್ನಿಗೇ, ವಿಶ್ವ ಮಾರ್ಕೆಟಿಂಗ್‌ ಗುರು ಎಂದೇ ಖ್ಯಾತರಾಗಿರುವ ಫಿಲಿಪ್‌ ಕೋಟ್ಲರ್‌ ಅವರು ಭಾರತಕ್ಕೆ ನಿಸ್ವಾರ್ಥ ಸೇವೆ ನೀಡಿರುವ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ. 

ಕೋಟ್ಲರ್‌ ಅವರು ತಮ್ಮ ಟ್ವೀಟ್‌ನಲ್ಲಿ  ಹೀಗೆ ಹೇಳಿದ್ದಾರೆ : ಪ್ರಪ್ರಥಮ ಫಿಲಿಪ್‌ ಕೋಟ್ಲರ್‌ ಅಧ್ಯಕ್ಷೀಯ ಪ್ರಶಸ್ತಿ ಜಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಅಭಿನಂದಿಸುತ್ತೇನೆ. ಭಾರತಕ್ಕೆ ಮೋದಿ ನೀಡುತ್ತಿರುವ ಅದ್ವಿತೀಯ ನಾಯಕತ್ವ ಮತ್ತು  ನಿಸ್ವಾರ್ಥ ಸೇವೆ, ಜತೆಗೆ ಅವರ ಅವಿರತ ಪರಿಶ್ರಮವನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ ಈ ಪ್ರಶಸ್ತಿಗೆ ಭಾಜನರಾಗುವವರು  ತೋರಬೇಕಾದ ಸಾಧನೆಯ ಮಟ್ಟ ಮೋದಿ ಅವರಿಂದಾಗಿ ಎತ್ತರಕ್ಕೆ ಏರಿದೆ.

ಈ ಪ್ರಶಸ್ತಿ ಮೋದಿ ಅವರಿಗೆ ಸಂದಿರುವುದನ್ನು ವ್ಯಂಗ್ಯದಿಂದ ಪ್ರಶಂಸಿಸಿ ಟೀಕಿಸಿದ್ದ ರಾಹುಲ್‌ ಗಾಂಧಿ, ‘ಅಷ್ಟೇನೂ ಪ್ರತಿಷ್ಠಿತವಲ್ಲದ ಈ ಪ್ರಶಸ್ತಿಗೆ ತೀರ್ಪುದಾರರು ಇಲ್ಲ; ಈ ಪ್ರಶಸ್ತಿಯನ್ನು ಈ ಮೊದಲು ಯಾರಿಗೂ ಕೊಟ್ಟದ್ದಿಲ್ಲ; ಈ ಪ್ರಶಸ್ತಿಗೆ ಕಂಡುಕೇಳರಿಯದ ಆಲಿಗಢದ ಕಂಪೆನಿಯೊಂದರ ಬೆಂಬಲವಿದೆ; ಜತೆಗೆ ಪತಂಜಲಿ ಮತ್ತು ರಿಪಬ್ಲಿಕ್‌ ಟಿವಿ ಇದರ ಈವೆಂಟ್‌ ಪಾರ್ಟ್‌ ನರ್‌ ಆಗಿವೆ’ ಎಂದು ಟ್ವೀಟ್‌ ಮಾಡಿದ್ದರು. 

ರಾಹುಲ್‌ ಟ್ವೀಟ್‌ಗೆ ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಟ್ಯಾಗ್‌ ಮಾಡಿ, ಪ್ರಧಾನಿ ಮೋದಿ ಅವರಂತಲ್ಲದ, ಗಾಂಧಿ ಕುಟುಂಬ ಈ ದೇಶದ ಪರಮೋಚ್ಚ ಭಾರತ ರತ್ನ ಪೌರ ಪ್ರಶಸ್ತಿಯನ್ನು ತಮಗೆ ತಾವೇ ಕೊಡಲು ನಿರ್ಧರಿಸಿದಂತಹ ಗಾಂಧಿ ಕುಟುಂಬದವರೊಬ್ಬರಿಂದ ಈ ರೀತಿಯ ಹೇಳಿಕೆ ಬಂದಿದೆ ಎಂದು ನೆನಪಿಸಿಕೊಟ್ಟಿದ್ದಾರೆ. 

ಪೀಪಲ್‌, ಪ್ರಾಫಿಟ್‌ ಮತ್ತು ಪ್ಲಾನೆಟ್‌ ಎಂಬ ತ್ರಿವಳಿ ತಳ-ಪರಿಕಲ್ಪನೆಯ ಈ ಪ್ರಶಸ್ತಿಯನ್ನು  ಈ ಬಾರಿಯಿಂದ ತೊಡಗಿ ವರ್ಷಂಪ್ರತಿ ಅದ್ವಿತೀಯ ಸಾಧಕ ರಾಷ್ಟ್ರ ನಾಯಕನೋರ್ವನಿಗೆ ನೀಡಲಾಗುತ್ತದೆ.

ಮೋದಿ ಅವರ ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ವಚ್ಚ ಭಾರತ್‌, ಆಧಾರ್‌ ಮುಂತಾಗಿ ಹಲವಾರು ಕ್ರಾಂತಿಕಾರಿ ಉಪಕ್ರಮಗಳನ್ನು ಲೆಕ್ಕಿಸಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ. 

ಫಿಲಿಪ್‌ ಕೋಟ್ಲರ್‌ ಅವರು ನಾರ್ತ್‌ ವೆಸ್ಟರ್ನ್ ಯುನಿವರ್ಸಿಟಿಯ ಅತ್ಯಂತ ಪ್ರತಿಭಾನ್ವಿತ  ಮಾರ್ಕೆಟಿಂಗ್‌ ಪ್ರೊಫೆಸರ್‌ ಆಗಿದ್ದಾರೆ.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

1-wwewqe

Lok Sabha ಅಖಾಡಕ್ಕೆ ಲಾಲು ಪ್ರಸಾದ್‌ ಪುತ್ರಿ ಡಾ| ರೋಹಿಣಿ ಹೆಜ್ಜೆ

RBI

Cyber ​​attack: ಭದ್ರತೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

K-Kavitha

ED; ದಿಲ್ಲಿ ಲಿಕ್ಕರ್‌ ಕೇಸ್‌ ಡೀಲ್‌ಗೆ ಕೆಸಿಆರ್‌ ಪುತ್ರಿ ಕವಿತಾ ಸಂಚು

supreem

Himachal Pradesh; 6 ಕೈ ಶಾಸಕರ ಅನರ್ಹತೆ ಆದೇಶಕ್ಕೆ ತಡೆ ಇಲ್ಲ: ಸುಪ್ರೀಂ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.