CONNECT WITH US  

ಕುಂಭಮೇಳದಿಂದ ಉ.ಪ್ರದೇಶಕ್ಕೆ 1.2 ಲಕ್ಷ ಕೋಟಿ ಆದಾಯ

ಕುಂಭಮೇಳಕ್ಕಾಗಿ ಯೋಗಿ ಸರಕಾರ ಮಾಡಿದ ಖರ್ಚು ಸುಮಾರು 4200 ಕೋಟಿ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಿಂದ ಉತ್ತರ ಪ್ರದೇಶಕ್ಕೆ ಸುಮಾರು 1.2 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ಉದ್ಯಮಗಳ ಒಕ್ಕೂಟ ತಿಳಿಸಿದೆ.

ಜನವರಿ 15ರಂದು ಆರಂಭವಾಗಿರುವ ಮಹಾ ಕುಂಭ ಮೇಳ ಮಾರ್ಚ್ 4 ರ ವರೆಗೆ ನಡೆಯಲಿದೆ. 12  ವರ್ಷಗಳಿಗೆ ಒಮ್ಮೆ ಮಾತ್ರ ನಡೆಯುವ ಈ ಮಹಾ ಕುಂಭ ಮೇಳಕ್ಕೆ ಉತ್ತರ ಪ್ರದೇಶ ಸರಕಾರ ಭಾರಿ ಖರ್ಚು ಮಾಡಿ ಅದ್ದೂರಿಯಾಗಿಯೇ ಆಯೋಜನೆ ಮಾಡಲಾದೆ. ಈ 50 ದಿನಗಳ ಕುಂಭಮೇಳಕ್ಕಾಗಿ ಯೋಗಿ ಸರಕಾರ ಸುಮಾರು 4200 ಕೋಟಿ ಖರ್ಚು ಮಾಡಿದ್ದಾರೆ. 


ಕೋಟ್ಯಾಂತರು ಜನರು ಭಾಗವಹಿಸುವ ಈ ಕುಂಭ ಮೇಳದಲ್ಲಿ ಸುಮಾರು 6 ಲಕ್ಷ ಉದ್ಯೋಗ  ಸೃಷ್ಠಿಯಾಗಿದೆ ವರದಿಯಲ್ಲಿ ತಿಳಿಸಿಲಾಗಿದೆ. ಇದಲ್ಲದೆ ಅಸಂಘಟಿತ ವಲಯಗಳಾದ ಪ್ರವಾಸಿ ಮಾರ್ಗದರ್ಶಿಗಳು, ಟ್ಯಾಕ್ಸಿಗಳು, ವಾಹನ ಚಾಲಕರು, ಸ್ವಯಂ ಸೇವಕರು ಹೀಗೆ ಸುಮಾರು 55 ಸಾವಿರ ಉದ್ಯೋಗ  ಸೃಷ್ಠಿಯಾಗಲಿದೆ. 


Trending videos

Back to Top