ಪ್ರತ್ಯೇಕ ಉಡುಪು ಅಳತೆ!
Team Udayavani, Jan 21, 2019, 12:55 AM IST
ಗಾಂಧಿನಗರ: ಭಾರತೀಯರಿಗಾಗಿ ಪ್ರತ್ಯೇಕ ವಾದ ಉಡುಪು ಅಳತೆ ವಿಧಾನವನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ಪರಿಚ ಯಿಸಲಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ.
ಗುಜರಾತ್ನಲ್ಲಿ ನಡೆಯುತ್ತಿರುವ ವೈಬ್ರಂಟ್ ಗುಜರಾತ್ ಜಾಗತಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್ ಹಾಗೂ ಅಮೆರಿಕ ತನ್ನದೇ ಆದ ಅಳತೆ ಮಾನದಂಡವನ್ನು ಹೊಂದಿದೆ. ಆದರೆ ಭಾರತದಲ್ಲಿ ಈ ರೀತಿ ನಿರ್ದಿಷ್ಟ ಮಾನದಂಡವಿಲ್ಲ. ಹೀಗಾಗಿ ಸೈಜ್ ಇಂಡಿಯಾ ಪ್ರಾಜೆಕ್ಟ್ ಅನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತಿದೆ. ಇದು ಭಾರತದ ಇತಿಹಾಸದಲ್ಲೇ ಮೊದಲನೆಯದಾಗಿದೆ ಎಂದಿ ದ್ದಾರೆ. ಭಾರತ ತನ್ನದೇ ಆದ ಉಡುಪು ಅಳತೆ ಮಾನದಂಡವನ್ನು ಹೊಂದಿಲ್ಲದ್ದರಿಂದ ರಫ್ತುದಾರರಿಗೆ ಸಮಸ್ಯೆ ಎದುರಾಗುತ್ತದೆ. ಇದನ್ನು ನಿವಾರಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.
ಅಲ್ಲದೆ, ಇದರೊಂದಿಗೆ ದೇಶೀಯ ಜವಳಿ ಮಾರು ಕಟ್ಟೆಯ ವ್ಯಾಪ್ತಿ, ಬೇಡಿಕೆಯನ್ನು ಅರಿ ಯಲು ಅಧ್ಯಯನ ನಡೆಸಲಾಗುತ್ತದೆ. ಇದರಿಂದಾಗಿ ದೇಶದಲ್ಲಿ ಜವಳಿ ವಲಯದ ನಿಜವಾದ ಬೇಡಿಕೆಯ ಅಂಕಿ ಅಂಶ ಲಭ್ಯ ವಾಗಲಿದೆ ಎಂದು ಅವರು ಹೇಳಿದ್ದಾರೆ.