ಆರ್ಥಿಕತೆ: ಇಂಗ್ಲೆಂಡನ್ನು ಮೀರಿಸಲಿದೆ ಭಾರತ
Team Udayavani, Jan 21, 2019, 1:20 AM IST
ಹೊಸದಿಲ್ಲಿ: 2019ರಲ್ಲಿ ಭಾರತವು ಇಂಗ್ಲೆಂಡನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಜಾಗತಿಕ ಕನ್ಸಲ್ಟನ್ಸಿ ಸಂಸ್ಥೆ ಪಿಡಬ್ಲೂéಸಿ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2017ರಲ್ಲಿ ಫ್ರಾನ್ಸನ್ನು ಹಿಂದಿಕ್ಕಿ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿತ್ತು. ಸಾಮಾನ್ಯವಾಗಿ 5ನೇ ಸ್ಥಾನಕ್ಕೆ ಇಂಗ್ಲೆಂಡ್ ಮತ್ತು ಫ್ರಾನ್ಸ್ ಪೈಪೋಟಿ ನೀಡುತ್ತಿದ್ದವು. ಆದರೆ ಈಗ ಭಾರತ 5ನೇ ಸ್ಥಾನ ಆಕ್ರಮಿಸಲಿದೆ ಎಂದು ವರದಿ ಹೇಳಿದೆ.
ಸಂಸ್ಥೆಯ ಜಾಗತಿಕ ಆರ್ಥಿಕ ಪರಿವೀಕ್ಷಣೆ ವರದಿ ಪ್ರಕಾರ, ಯುನೈಟೆಡ್ ಕಿಂಗ್ಡಮ್ನ ನೈಜ ಜಿಡಿಪಿ ಪ್ರಗತಿ ಶೇ.1.6, ಫ್ರಾನ್ಸ್ನದ್ದು ಶೇ. 1.7 ಆಗಿದೆ. ಭಾರತದ ಜಿಡಿಪಿ ಪ್ರಗತಿ ಶೇ. 7.6 ನಿರೀಕ್ಷಿಸ ಲಾಗಿದೆ. ಯಾವುದೇ ಜಾಗತಿಕ ಆರ್ಥಿಕ ಸಂಕಷ್ಟ ಎದುರಾಗದೇ ಇದ್ದರೆ ಭಾರತ ಶೇ.7.6ರಷ್ಟು ಆರೋಗ್ಯಕರ ಜಿಡಿಪಿ ಸಾಧಿಸ ಲಿದೆ. ಜಿಎಸ್ಟಿ ಹಾಗೂ ಇತರ ವಿವಿಧ ನೀತಿ ನಿರೂಪಣೆಗಳಿಂದ ದೇಶ ಪ್ರಗತಿ ಸಾಧಿಸಲಿದೆ ಎಂದು ವರದಿ ಹೇಳಿದೆ. ಇನ್ನೊಂದೆಡೆ ಇಂಗ್ಲೆಂಡ್ಗೆ ಬ್ರೆಕ್ಸಿಟ್ ಸಮಸ್ಯೆಯಿಂದ ಆರ್ಥಿ ಕತೆಗೆ ಹೊಡೆತ ಬಿದ್ದಿದ್ದು, ಅದು 5ರಿಂದ 7ನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
MUST WATCH
ಹೊಸ ಸೇರ್ಪಡೆ
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!