ಹೊಸ ವೈರಾಣು ಸವಾಲು
Team Udayavani, Jan 30, 2019, 12:30 AM IST
ಇಂದೋರ್: ನಿಗೂಢವಾದ ವೈರಾಣುವೊಂದು ಇಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 4 ತಿಂಗಳಲ್ಲಿ ಇದರ ಸೋಂಕಿಗೆ ಒಳಗಾದವರಲ್ಲಿ 64 ಜನರು ಪ್ರಾಣ ತೆತ್ತಿದ್ದಾರೆ ಎಂಬ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಈ ವೈರಾಣು (ವೈರಸ್) ತಗುಲಿದ ವ್ಯಕ್ತಿಗಳು ಹಂದಿ ಜ್ವರ ಹೋಲುವ ಕಾಯಿಲೆಯಿಂದ ಬಳಲುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಉತ್ತರ ಭಾರತದ ಅಲ್ಲಲ್ಲಿ, ಈಗಾಗಲೇ ಹಂದಿ ಜ್ವರ, ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈವರೆಗೆ 39 ಹಂದಿ ಜ್ವರ ಪ್ರಕರಣ, 350 ಡೆಂಗ್ಯೂ ಜ್ವರ ಪ್ರಕರಣಗಳು ದಾಖಲಾಗಿವೆ. ಆದರೆ, ಇವೆರಡನ್ನೂ ಮೀರಿದ ಮತ್ತೂಂದು ಮಾದರಿಯ ಜ್ವರ ಲಕ್ಷಣಗಳು ಕಾಣಿಸಿಕೊಂಡಿರುವುದು ವೈದ್ಯರಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಹಾಗಾಗಿ, ಜ್ವರದಿಂದ ದಾಖಲಾಗಿರುವ ಎಲ್ಲರ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಭೋಪಾಲ್ನಲ್ಲಿರುವ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಹಂದಿ ಜ್ವರದ ವೈರಾಣುಗಳು ಪ್ರತಿ ವರ್ಷ ತಮ್ಮ ವಂಶವಾಹಿಯಲ್ಲಿ ಬದಲಾವಣೆ ಹೊಂದುವ ಮೂಲಕ ಹೊಸ ವೈರಸ್ಗಳಾಗಿ ಮಾರ್ಪಡುತ್ತವೆ. ನೂತನ ವೈರಸ್ಗಳ ಜ್ವರವೂ, ಹಂದಿ ಜ್ವರಕ್ಕೆ ಹೋಲುತ್ತಿದೆ. ಹಾಗಾಗಿ, ಹೊಸ ವೈರಾಣುಗಳು, ಹಂದಿ ಜ್ವರದ ವೈರಾಣುಗಳ ಹೊಸ ಸ್ವರೂಪವಿರಬಹುದು.
ಡಾ| ಅಮಿತ್ ಮಳಕರ್, ಐಡಿಎಸ್ಪಿ ಅಧಿಕಾರಿ
ಈ ನಿಗೂಢ ವೈರಸ್ಗೆ ಇಂದೋರ್ನಲ್ಲಿ 4 ತಿಂಗಳಲ್ಲಿ 64 ಜನರ ಸಾವು
ಸೋಂಕಿತರ ರಕ್ತ ಮಾದರಿ ವೈರಾಲಜಿ ಲ್ಯಾಬ್ಗ ರವಾನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ