ಕೋಟಿ ಕಿ ಆಶಾ..!


Team Udayavani, Feb 2, 2019, 12:30 AM IST

c-22.jpg

ಮುಂದಿನ ಪೀಳಿಗೆಗೆ ಸದೃಢ ಭಾರತವನ್ನು ಕಟ್ಟಿಕೊಡುವ ಆಶಯದೊಂದಿಗೆ ಮುಂದಿನ 10 ವರ್ಷಗಳಲ್ಲಿ ಹತ್ತು ಮಹತ್ವದ ಅಂಶಗಳನ್ನು ಜಾರಿಗೊಳಿಸುವ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾಪಿಸ‌ಲಾಗಿದೆ. 2030ರ ಹೊತ್ತಿಗೆ ಸಮರ್ಪಕ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ನಿರುದ್ಯೋಗ ನಿವಾರಣೆ‌, ಅಗತ್ಯ ಆಹಾರ ಉತ್ಪಾದನೆ ಗುರಿ ಹೊಂದಲಾಗಿದೆ.13 ವರ್ಷಗಳಲ್ಲಿ ಭಾರತವನ್ನು 10 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯ ದೇಶವನ್ನಾಗಿಸುವ ಆಸ್ಥೆ ಇದರಲ್ಲಿದೆ.

2013-14ರಲ್ಲಿ ವಿಶ್ವದ 11ನೇ ಅತಿ ದೊಡ್ಡ ಆರ್ಥಿಕತೆ ಎಂದೆನಿಸಿದ್ದ ಭಾರತ, ಇದೀಗ 6ನೇ ಸ್ಥಾನಕ್ಕೇರಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶವನ್ನು 5ನೇ ಸ್ಥಾನಕ್ಕೇರಿಸುವ ಬಯಕೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದು, 2019-20ರ ಬಜೆಟ್‌ನಲ್ಲಿ ಈ ನಿಟ್ಟಿನಲ್ಲಿ ಹೆಜ್ಜೆಯನ್ನಿಡಲಾಗಿದೆ. ಮುಂದಿನ 13 ವರ್ಷಗಳಲ್ಲಿ ಭಾರತವನ್ನು 10 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿಸುವ ಕನಸು ಕಾಣಲಾಗಿದ್ದು, ಆ ನಿಟ್ಟಿನಲ್ಲಿ, 2030ರ ಹೊತ್ತಿಗೆ ಸದೃಢ ‘ನವ ಭಾರತ’ವನ್ನು ಕಟ್ಟಲು ಸಾಧ್ಯವಾಗುವಂತೆ 10 ಅಂಶಗಳನ್ನು ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ.

ಏನೇನಿದೆ ಈ ಮಹಾ ಕನಸಿನಲ್ಲಿ?

1ವಾಸ ಯೋಗ್ಯ ಪರಿಸರ ನಿರ್ಮಾಣ
ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ ಮೂಲಕ ಈ ಗುರಿ ಈಡೇರಿಕೆಗೆ ಕ್ರಮ. ಭೌತಿಕ ಸೌಕರ್ಯದಡಿ, ಸಮರ್ಪಕ ರಸ್ತೆ, ರೈಲು, ಬಂದರುಗಳು, ವಿಮಾನ ನಿಲ್ದಾಣಗಳು, ಅನಿಲ ಮತ್ತು ವಿದ್ಯುತ್‌ ಸರಬರಾಜು, ದೇಶೀಯ ಜಲ ಮಾರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ. ಸಾಮಾಜಿಕ ಸೌಕರ್ಯಗಳಡಿ, ಪ್ರತಿಯೊಂದು ಕುಟುಂಬಕ್ಕೊಂದು ಮನೆ, ವಾಸಯೋಗ್ಯ ಪರಿಸರ, ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ವೈಜ್ಞಾನಿಕ ಶಿಕ್ಷಣ ಪದ್ಧತಿ ಜಾರಿಗೊಳಿಸುವ ಗುರಿ.

2’ಡಿಜಿಟಲ್‌ ಇಂಡಿಯಾ’ದಿಂದ ಮತ್ತಷ್ಟು ಉದ್ಯೋಗ ಸೃಷ್ಟಿ
ಹೊಸ ಸ್ಟಾರ್ಟಪ್‌ಗ್ಳಿಂದ 10 ಲಕ್ಷ ಉದ್ಯೋಗ ಸೃಷ್ಟಿಯ ಕನಸು. ಮುಂದಿನ ಐದು ವರ್ಷಗಳಲ್ಲಿ 1 ಲಕ್ಷ ಹಳ್ಳಿಗಳನ್ನು ಡಿಜಿಟಲ್‌ ಹಳ್ಳಿಗಳನ್ನಾಗಿಸುವುದು ಇದರ ಮತ್ತೂಂದು ಆಯಾಮ. ಕಡಿಮೆಯಿರುವ ಅಂತರ್ಜಾಲ ಡೇಟಾ ಹಾಗೂ ಮೊಬೈಲ್‌ ಕರೆ ದರಗಳ ಅನುಕೂಲಗಳು ಮತ್ತಷ್ಟು ಜನರಿಗೆ ಸಿಗುವಂತೆ ಮಾಡಲು ನಿರ್ಧಾರ. ಸದ್ಯಕ್ಕೆ ಸಾಮಾನ್ಯ ಸೇವಾ ಕೇಂದ್ರಗಳಿಂದ (ಸಿಎಸ್‌ಸಿ) 12 ಲಕ್ಷ ಮಂದಿಗೆ ಉದ್ಯೋಗ ಸಿಕ್ಕಿದ್ದು, ಇದನ್ನು ಮತ್ತಷ್ಟು ಹೆಚ್ಚುವಂತೆ ಮಾಡುವ ಗುರಿ. 2030ರೊಳಗೆ ಡಿಜಿಟಲ್‌ ಮೂಲಸೌಕರ್ಯ, ಡಿಜಿಟಲ್‌ ಆರ್ಥಿಕತೆಯ ಸಮಾಜ ನಿರ್ಮಿಸುವ ಇರಾದೆ.

3 ‘ಪರಿಸರ ಸ್ನೇಹಿ ದೇಶ’ ನಿರ್ಮಾಣ
ಭುವಿಯ ಹಸಿರು, ಜನರ ಉಸಿರನ್ನು ರಕ್ಷಿಸುವ ನಿಟ್ಟಿನಲ್ಲಿ ದೇಶವನ್ನು ಮಾಲಿನ್ಯ ಮುಕ್ತಗೊಳಿಸಲು ಮಹತ್ವದ ಹೆಜ್ಜೆ. ಮುಂಬರುವ ದಿನಗಳಲ್ಲಿ ಜೈವಿಕ ಇಂಧನಾಧಾರಿತ, ವಿದ್ಯುಚ್ಛಕ್ತಿ ಆಧಾರಿತ ವಾಹನಗಳ ತಯಾರಿಕೆಗೆ, ಬಳಕೆಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ. ವಿದ್ಯುತ್‌ ಸಂಗ್ರಹಣೆಯಲ್ಲಿ ಹೊಸ ಕ್ರಾಂತಿ ತಂದು, ವಿಶ್ವದ 3ನೇ ಅತಿ ದೊಡ್ಡ ತೈಲ ಆಮದು ರಾಷ್ಟ್ರವೆಂಬ ಹಣೆಪಟ್ಟಿಯನ್ನು ಕಳಚಿ, ದೇಶವನ್ನು ತೈಲಾವಲಂಬನೆಯಿಂದ ಮುಕ್ತಗೊಳಿಸಲು ನಿರ್ಧಾರ.

4ಗ್ರಾಮೀಣ ಕೈಗಾರಿಕೆಗೆ ಒತ್ತು
ಅತ್ಯಾಧುನಿಕ ಡಿಜಿಟಲ್‌ ತಂತ್ರಜ್ಞಾನದ ಮೂಲಕ ಗ್ರಾಮೀಣ ಕೈಗಾರಿಕೆಯನ್ನು ಸರ್ವವ್ಯಾಪಿಯಾಗಿಸಿ, ಹಳ್ಳಿಗಳಲ್ಲಿ ಹೆಚ್ಚೆಚ್ಚು ಉದ್ಯೋಗ ಕಲ್ಪಿಸುವ ಗುರಿ. ‘ಮೇಕ್‌ ಇನ್‌ ಇಂಡಿಯಾ’ದಡಿ ಮಧ್ಯಮ ಗ್ರಾತದ ಕೈಗಾರಿಕೆಗಳು, ಗ್ರಾಮೀಣ ಉದ್ಯೋಗಗಳು ಹಾಗೂ ಸ್ಟಾರ್ಟಪ್‌ಗ್ಳನ್ನು ಒಂದೇ ಸೂರಿನಡಿ ತರುವ ಮೂಲಕ ಗ್ರಾಮೀಣ ಪ್ರದೇಶಗಳನ್ನು ‘ಉತ್ಪಾದನಾ ಸ್ವರ್ಗ’ಗಳನ್ನಾಗಿಸುವ ಕನಸು. ಜತೆಗೆ, ಆಟೋಮೊಬೈಲ್‌, ಎಲೆಕ್ಟ್ರಾನಿಕ್‌, ರಕ್ಷಣಾ ಸಾಮಗ್ರಿ ಹಾಗೂ ವೈದ್ಯಕೀಯ ಪರಿಕರಗಳ ತಯಾರಿಕೆಯಲ್ಲಿ ಮಂಚೂಣಿಯತ್ತ ಸಾಗುತ್ತಿರುವ ಭಾರತದ ಹಾದಿ ಮತ್ತಷ್ಟು ಸುಗಮವಾಗಿಸಲು ನಿರ್ಧಾರ.

5 ‘ಮಲಿನ ಮುಕ್ತ’ ನೀರಿನ ಮೂಲಗಳು
ಗಂಗಾ ನದಿ ಸ್ವಚ್ಛತೆಯ ಕಾರ್ಯಕ್ರಮದಂತೆ 2030ರೊಳಗೆ ದೇಶದ ಎಲ್ಲಾ ನದಿಗಳು, ಜಲ ಸಂಪನ್ಮೂಲಗಳನ್ನು ಸ್ವಚ್ಛಗೊಳಿಸಿ ಆ ಮೂಲಕ ಕುಡಿಯುವುದಕ್ಕೆ, ವ್ಯವಸಾಯಕ್ಕೆ ಮಲಿನ ಮುಕ್ತ ನೀರನ್ನು ಕೊಡಲು ತೀರ್ಮಾನ. ಮೈಕ್ರೋ ವ್ಯವಸಾಯ ಪದ್ಧತಿಗಳಿಂದ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ತರುವ ಹೊಸ ವಿಧಾನಗಳನ್ನು ಅನುಷ್ಠಾನಗೊಳಿಸಲು ಯೋಜನೆ.

6 ಕರಾವಳಿ ಪ್ರದೇಶಗಳ ಅಭಿವೃದ್ಧಿ
ಸಾಗರ ಸಂಪನ್ಮೂಲದ ಸದ್ಬಳಕೆ ಹಾಗೂ ಸಂರಕ್ಷಣೆಗೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ. ಸಾಗರ ಮಾಲಾ ಕಾರ್ಯಕ್ರಮದಡಿ, ಕರಾವಳಿ ತೀರದ ಜನ ಜೀವನವನ್ನು ಮತ್ತಷ್ಟು ಉತ್ತಮಗೊಳಿಸಲು, ಆಂತರಿಕ ಜಲಮಾರ್ಗಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ತೀರ್ಮಾನ.

7 ಬಾಹ್ಯಾಕಾಶ ವಿಜ್ಞಾನಕ್ಕೆ ಉತ್ತೇಜನ
ಮಹತ್ವಾಕಾಂಕ್ಷೆಯ ‘ಗಗನ ಯಾನ’ ಕಾರ್ಯಕ್ರಮದ ಮೂಲಕ ಭಾರತವನ್ನು ವಿಶ್ವದ ಪ್ರಮುಖ ಉಡ್ಡಯನ ಕೇಂದ್ರವನ್ನಾಗಿಸಲು ಪಣ. 2022ರೊಳಗೆ ಭಾರತದ ಅಂತರಿಕ್ಷ ಯಾತ್ರಿಗಳನ್ನು ವಿವಿಧ ಗ್ರಹಗಳ ಅಧ್ಯಯನಕ್ಕೆ ಕಳುಹಿಸುವ ಕನಸು.

8 ಸಮರ್ಪಕ ಆಹಾರ
ದೇಶದ ಎಲ್ಲಾ ನಾಗರಿಕರಿಗೂ ಸಮರ್ಪಕ ಆಹಾರ ಸಿಗುವಂತೆ ಮಾಡುವ ಮಹತ್ವದ ಅಂಶವಿದು. ಅತ್ಯಾಧುನಿಕ ವೈಜ್ಞಾನಿಕ ಸೌಕರ್ಯಗಳಿಂದ ಹಾಗೂ ವಿವಿಧ ಜೈವಿಕ ಕೃಷಿಯ ವಿಧಾನಗಳಿಂದ ಅಧಿಕ ಇಳುವರಿಯನ್ನು ಪಡೆಯುವ ಗುರಿ. ಜತೆಗೆ, ಕೃಷಿ ಉತ್ಪನ್ನಗಳು ಹಾಗೂ ಆಹಾರ ಸಂಸ್ಕರಣೆ, ಪ್ಯಾಕೇಜಿಂಗ್‌ ಹಾಗೂ ಕೋಲ್ಡ್‌ ಸ್ಟೋರೇಜ್‌ಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ.

9 ಸುಲಲಿತ ಆರೋಗ್ಯ ವಿಮಾ ಸೇವೆ
‘ಆಯುಷ್ಮಾನ್‌ ಭಾರತ’ದ ಮೂಲಕ 2030ರೊಳಗೆ ಎಲ್ಲರಿಗೂ ಸುಲಲಿತ ಆರೋಗ್ಯ ವಿಮಾ ಸೇವೆ. ಮಹಿಳೆಯರ ಆರೋಗ್ಯ ಸಂರಕ್ಷಣೆಗೆ ವಿಶೇಷ ಮಹತ್ವ. ಕಿರಿಕಿರಿಯಿಲ್ಲದ ಆರೋಗ್ಯ ವಿಮೆಗಳ ಪ್ರಕ್ರಿಯೆಗಳಿಂದ ಜನರಿಗೆ ಹೊಸ ಅನುಕೂಲ.

10ಮಾದರಿ ಆಡಳಿತ ವ್ಯವಸ್ಥೆ
ಬಡತನ, ಅಪೌಷ್ಟಿಕತೆ, ಅನಕ್ಷರತೆ, ಅಶುದ್ಧ ಪರಿಸರ ಮುಂತಾದ ಸಾಮಾಜಿಕ ಪಿಡುಗಳಿಂದ ಭಾರತವನ್ನು ಮುಕ್ತಗೊಳಿಸುವ ಇರಾದೆ. ಈ ಮೂಲಕ ಭಾರತವನ್ನು ಆಧುನಿಕ, ತಂತ್ರಜ್ಞಾನ ಸ್ನೇಹಿ, ಉತ್ತಮ ಆರ್ಥಿಕ ಬೆಳವಣಿಗೆ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯ ದೇಶವಾಗಿ ಮಾರ್ಪಾಟು ಮಾಡುವ ಗುರಿ. ಕಡಿಮೆ ಸರ್ಕಾರ, ಗರಿಷ್ಠ ಆಡಳಿತ ಮಾದರಿಯಲ್ಲಿ ‘ಮಾದರಿ ಆಡಳಿತ ವ್ಯವಸ್ಥೆ’.

ಬಡವರಿಗೆ ಆಹಾರ
ಬಡವರು ಮತ್ತು ಮಧ್ಯಮವರ್ಗದವರಿಗೆ ಆಹಾರ ಧಾನ್ಯಗಳು ಕೈಗೆಟಕುವ ಬೆಲೆಗಳಲ್ಲಿ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ 2018-19ರ ಅವಧಿಗೆ 1,70,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ನರೇಗಾಕ್ಕೆ 60,000 ಕೋಟಿ ರೂ. ನಿಗದಿಗೊಳಿಸಲಾಗಿದೆ.

3.4%
ಕಳೆದ 8 ವರ್ಷಗಳಲ್ಲಿ ಭಾರತದ ಹಣದುಬ್ಬರ ಇಳಿಕೆ ಪ್ರಮಾಣ

ದೇಶದ ಎಲ್ಲಾ ವರ್ಗಗಳಿಗೆ ಅನುಕೂಲ ಆಗುವ ಬಜೆಟನ್ನು ಕೇಂದ್ರ ನೀಡಿದೆ. ಮೋದಿ ಸರ್ಕಾರ ದೇಶದ ಯುವಕರು, ರೈತರು ಮತ್ತು ಬಡವರ ಆಕಾಂಕ್ಷೆಗಳನ್ನು ಈಡೇರಿಸಿದೆ.
● ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ

ಈಗಾಗಲೇ ಸೋಲೊಪ್ಪಿಕೊಂಡಿರುವ ಕೇಂದ್ರ ಹತಾಶೆ ಭಾವದಲ್ಲಿದೆ. ಹೀಗಾಗಿ ಚುನಾವಣೆ ಗಿಮಿಕ್‌ನಿಂದ ಕೂಡಿದ ಬಜೆಟ್ ಮಂಡಿಸಿದ್ದು, ಇದೊಂದು ಎಕ್ಸ್‌ಪೈರಿ ಬಜೆಟ್.
● ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಮೋದಿ ಸರ್ಕಾರ ನೀಡಿದ್ದ ‘ಅಚ್ಛೇ ದಿನ್‌’ನ ನಂಬಿಕೆ ಸಂಪೂರ್ಣವಾಗಿ ಇಲ್ಲವಾಗಿದೆ. ಬಿಜೆಪಿ ಸರ್ಕಾರ ತನ್ನ ಕಡೇ ಬಜೆಟ್‌ನಲ್ಲಿ ಬಡವರು, ರೈತರು, ಗೋಮಾತೆಯನ್ನು ನೆನೆಸಿಕೊಂಡಿದೆ.
● ಕಮಲ್‌ನಾಥ್‌, ಮಧ್ಯಪ್ರದೇಶ ಮುಖ್ಯಮಂತ್ರಿ

ಕಾರ್ಮಿಕರಿಗೆ ನೆರವು, ರೈತರಿಗೆ ಸಿಹಿಸುದ್ದಿ. ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಆರ್ಥಿಕ ಶಕ್ತಿ. ಆದಾಯ ತೆರಿಗೆ ಮಿತಿ ದ್ವಿಗುಣ. ಒಟ್ಟಾರೆ ಅಭಿವೃದ್ಧಿಶೀಲ ಬಜೆಟ್.
● ಸದಾನಂದ ಗೌಡ, ಕೇಂದ್ರ ಸಚಿವ

ಯುದ್ಧ ಕಾಲದ ಬಜೆಟ್ಟನ್ನು ಪರಿಗಣಿಸ ಬೇಕಿಲ್ಲ. ಇದು ಮಧ್ಯಂತರ ಬಜೆಟ್. ಅನುಷ್ಠಾನ ಅನುಮಾನ. ಇದರ ರಾಜಕೀಯ ವಿಶ್ಲೇಷಣೆ ವ್ಯರ್ಥ ಕಸರತ್ತು.
● ವೈ.ಎಸ್‌.ವಿ.ದತ್ತಾ, ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.