ದೋಷಯುಕ್ತ EVMನಿಂದ ಕಮಲ ಬ್ರಿಟನ್, ಅಮೆರಿಕದಲ್ಲೂ ಅರಳೀತು: ಶಿವ ಸೇನೆ
Team Udayavani, Feb 11, 2019, 5:42 AM IST
ಮುಂಬಯಿ : ‘ದೋಷಯುಕ್ತ EVM ಬಳಸಲ್ಪಟ್ಟಲ್ಲಿ ಭಾರತೀಯ ಜನತಾ ಪಕ್ಷದ ಕಮಲ, ಲಂಡನ್, ಅಮೆರಿಕದಲ್ಲಿ ಕೂಡ ಅರಳುವುದು ಸಾಧ್ಯವಿದೆ’ ಎಂದು ಬಿಜೆಪಿಯ ಪರಿತ್ಯಕ್ಷ ಮಿತ್ರ ಪಕ್ಷ ಶಿವ ಸೇನೆ ಕಟಕಿಯಾಡಿದೆ.
‘ಭಾರತೀಯ ಜನತಾ ಪಕ್ಷದ ನಾಯಕರಲ್ಲಿ ಅತಿಯಾದ ಆತ್ಮ ವಿಶ್ವಾಸ, ತೀವ್ರವಾಗಿ ಸಾಗುತ್ತಿರುವ ರಫೇಲ್ ವಿವಾದ, ದೋಷಯುಕ್ತ ಇವಿಎಂ ಗಳು, ಬಿಜೆಪಿ ನಾಯಕರ ಲಂಗು ಲಗಾಮಿಲ್ಲದ ಬೇಜವಾಬ್ದಾರಿಯ ಹೇಳಿಕೆಗಳೇ ಮೊದಲಾದ ಹಲವಾರು ವಿಷಯಗಳು ಬಿಜೆಪಿಗೆ ಮುಂಬಯಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಿರುಗುಬಾಣವಾಗಲಿದೆ’ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಎಚ್ಚರಿಸಿದರು.
‘ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳ ಪೈಕಿ 43 ಸ್ಥಾನಗಳನ್ನು ಗೆಲ್ಲುವ ಅತಿಯಾದ ಆತ್ಮವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹಾಗಾಗಿ ಅದು ಚುನಾವಣಾ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡುವ ಭಂಡತನ ತೋರುತ್ತಿದೆ. ಅದರ ಈ ನಿಲುವು ಪಕ್ಷಕ್ಕೆ ಮುಳುವಾಗಲಿದೆ’ ಎಂದು ಠಾಕ್ರೆ ಹೇಳಿದರು.
‘ಅಯೋಧ್ಯೆಯಲ್ಲಿ ಬಿಜೆಪಿಯ ಕಮಲ ಏಕೆ ಅರಳಲಿಲ್ಲ?’ ಎಂದು ಠಾಕ್ರೆ ವ್ಯಂಗ್ಯದಿಂದ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ