CONNECT WITH US  

ಪಾಕ್‌ ಪ್ರಧಾನಿಯಂತೆ ವರ್ತಿಸುವ ಮೋದಿ ವಿಶ್ವವಿಖ್ಯಾತ ಸುಳ್ಳುಗಾರ:Kejri

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವಿಖ್ಯಾತ ಸುಳ್ಳುಗಾರ ಎಂದು ಕರೆದಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌,  ಭಾರತದ ಒಕ್ಕೂಟ ಸ್ವರೂಪವನ್ನು ಬುಡಮೇಲು ಮಾಡುವ ವಿಷಯದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಪಾಕ್‌ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಆಗ್ರಹಿಸಿ ದಿಲ್ಲಿಯಲ್ಲಿ ನಿರಶನ ಸತ್ಯಾಗ್ರಹ ನಿರತರಾಗಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಿರುವ ಆಮ್‌ ಆದ್ಮಿ ಮುಖ್ಯಸ್ಥ ಕೇಜ್ರಿವಾಲ್‌, ಪ್ರಧಾನಿ ಮೋದಿಯನ್ನು ನಂಬುವಂತಿಲ್ಲ ಎಂದು ದೂಷಿಸಿದರು.

ಆಂಧ್ರ ಪ್ರದೇಶದ ಸಿಎಂ ಮತ್ತು ಅವರ ರಾಜ್ಯದ ಸಹಸ್ರಾರು ಜನರು ವಿಶೇಷ ಸ್ಥಾನಮಾನಕ್ಕಾಗಿ ಇಲ್ಲಿ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಒದಗಿರುವುದು ದುರದೃಷ್ಟಕರ. ಈ ವಿದ್ಯಮಾನ ದೇಶದ ಒಕ್ಕೂಟ ವ್ಯವಸ್ಥೆಗೆ ಭಾರೀ ದೊಡ್ಡ ಪ್ರಶ್ನೆಯನ್ನು ಎಸೆಯುವಂತಿದೆ ಎಂದು ಕೇಜ್ರಿವಾಲ್‌ ಅವರು ಸಿಎಂ ನಾಯ್ಡು ಅವರ ನಿರಶನ ತಾಣವಾಗಿರುವ ಇಲ್ಲಿನ ಆನಂದ ಭವನದಲ್ಲಿ ಗುಡುಗಿದರು.  

2014ರ ಆಂಧ್ರ ಪುನಾರಚನೆ ಕಾಯಿದೆಯಡಿಯ ಬದ್ಧತೆಯ ಪ್ರಕಾರ ಕೇಂದ್ರ ಸರಕಾರ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕಿದೆ ಎಂದು ಕೇಜ್ರಿವಾಲ್‌ ಹೇಳಿದರು.


Trending videos

Back to Top