ಗಗನಯಾನ ಆಯ್ಕೆ ಹೊಣೆ ಐಎಎಫ್ಗೆ
Team Udayavani, Feb 12, 2019, 12:30 AM IST
ಹೊಸದಿಲ್ಲಿ: 2021ರಲ್ಲಿ ತಾನು ಕೈಗೊಳ್ಳಲಿರುವ ಮಾನವ ಸಹಿತ ಗಗನ ಯಾನಕ್ಕೆ ಸೂಕ್ತ ವ್ಯಕ್ತಿಗಳನ್ನು ಆರಿಸಿ, ಅವರಿಗೆ ಅಗತ್ಯ ತರಬೇತಿ ನೀಡುವ ಹೊಣೆಯನ್ನು ಇಸ್ರೋ, ಭಾರತೀಯ ವಾಯು ಸೇನೆಗೆ (ಐಎಎಫ್) ವಹಿಸಿದೆ. ಆಯ್ಕೆ ಹಾಗೂ ತರಬೇತಿಯ ವೇಳೆ ಅನುಸರಿಸಬೇಕಾದ ಮಾನದಂಡ ಗಳನ್ನು ಪಟ್ಟಿ ಮಾಡಿ ಈಗಾಗಲೇ ಐಎಎಫ್ಗೆ ನೀಡಲಾಗಿದೆ ಎಂದು ಇಸ್ರೋ ಹೇಳಿದೆ. ತರಬೇತಿಗೆ ಆಯ್ಕೆಯಾದ 10 ವ್ಯಕ್ತಿಗಳಿಗೆ ಬೆಂಗಳೂರಿನಲ್ಲಿರುವ ಐಎಎಫ್ನ ಇನ್ಸ್ಟಿ ಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿ ನ್ನಲ್ಲಿ (ಐಎಎಂ) ಮೊದಲ ಹಂತದ ತರಬೇತಿ ನೀಡಲಾಗುತ್ತದೆ. ಎರಡನೇ ಹಂತದ ತರಬೇತಿ ವಿದೇಶದಲ್ಲಿ ನಡೆಯ ಲಿದೆ. ಕೊನೆಯ ಹಂತದ ತರಬೇತಿ ಯಲ್ಲಿ ಮೂವರನ್ನು ಗಗನಯಾ ನಕ್ಕೆ ಆಯ್ಕೆ ಮಾಡಲಾಗುತ್ತದೆ.