CONNECT WITH US  

ದೆಹಲಿ ಖಾಸಗಿ ಹೊಟೇಲ್ ನಲ್ಲಿ ಬೆಂಕಿ ಅವಘಡ : 15 ಸಾವು

ಬೆಂಕಿ ಅವಘಡಕ್ಕೆ ಒಳಗಾಗಿರುವ ಖಾಸಗಿ ಹೊಟೇಲ್ ನ ಮೂಲ ಚಿತ್ರ.

ದೆಹಲಿ: ಇಲ್ಲಿನ ಕರೋಲಾಬಾಗ್ ಪ್ರದೇಶದಲ್ಲಿರುವ ಖಾಸಗಿ ಹೊಟೇಲೊಂದರಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇದುವರೆಗೆ ಓರ್ವ ಮಹಿಳೆ, ಮಗು ಸೇರಿ ಮೃತರ ಸಂಖ್ಯೆ 15ಕ್ಕೇರಿದೆ. ಗಾಯಾಳುಗಳನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಈ ಅಗ್ನಿ ಅನಾಹುತ ಸಂಭವಿಸಿತು ಎಂದು ತಿಳಿದುಬಂದಿದೆ.

ಹೊಟೇಲ್ ನ ಮೇಲ್ಮಹಡಿಯನ್ನು ಬೆಂಕಿಯ ಜ್ವಾಲೆಗಳು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಹೊಟೇಲ್ ಒಳಗಡೆ ಇನ್ನಷ್ಟು ಜನರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ. ಹೊಟೇಲ್ ನ ಒಳಗಡೆ ಸಿಲುಕಿರುವವರನ್ನು ರಕ್ಷಿಸುವ ಕಾರ್ಯವನ್ನು ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಇದುವರೆಗೆ 25ಕ್ಕೂ ಹೆಚ್ಚು ಜನರನ್ನು ಹೊಟೇಲ್ ಒಳನಿಗಿಂದ ರಕ್ಷಿಸಲಾಗಿದೆ ಎಂದು ತಿಳಿದುಬಂದಿದ್ದು, ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿದ ಕುರಿತಾಗಿ ವರದಿಯಾಗಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.


Trending videos

Back to Top