CONNECT WITH US  

ರಾಷ್ಟ್ರಪತಿಯಿಂದ ಸೆಂಟ್ರಲ್‌ ಹಾಲ್‌ನಲ್ಲಿ ವಾಜಪೇಯಿ ಭಾವಚಿತ್ರ ಅನಾವರಣ

ಹೊಸದಿಲ್ಲಿ : ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರಿಂದು ಮಂಗಳವಾರ ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಆಳೆತ್ತರದ ಭಾವಚಿತ್ರವನ್ನು ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ ನಲ್ಲಿ ಅನಾವರಣಗೊಳಿಸಿದರು. 

ಅತ್ಯಂತ ಕಷ್ಟಕರ ಸನ್ನಿವೇಶದಲ್ಲಿ ದೇಶವನ್ನು ಮುನ್ನಡೆಸಿದ್ದ ದಿವಂಗತ ಪ್ರಧಾನಿ ವಾಜಪೇಯಿ ಅವರು ಹಿರಿಯ ರಾಜಕೀಯ ಮುತ್ಸದ್ದಿಯಾಗಿ ಅಪಾರ ಸಹನೆ, ತಾಳ್ಮೆ, ಸಹೃದಯತೆ ತೋರುವ ಮೂಲಕ ಅಜಾತ ಶತ್ರು ವಾಗಿದ್ದರು ಎಂದು ರಾಷ್ಟ್ರಪತಿ ಕೋವಿಂದ್‌ ಹೇಳಿದರು. 

ವಾಜಪೇಯಿ ಅವರ ಈ ಭಾವಚಿತ್ರವನ್ನು ರಚಿಸಿದ ಕಲಾವಿದ ಕೃಷ್ಣ ಕನ್ಹಯ್ಯ ಅವರನ್ನು ರಾಷ್ಟ್ರಪತಿ ಸಮ್ಮಾನಿಸಿದರು. ನಗುಮೊಗದ ವಾಜಪೇಯಿ ಅವರು ಯಾವತ್ತೂ ಧರಿಸುತ್ತಿದ್ದ ಧೋತಿ-ಕುರ್ತಾ ಮತ್ತು ಸ್ಲಿವ್‌ಲೆಸ್‌ ಬ್ಲ್ಯಾಕ್‌ ಜ್ಯಾಕೆಟ್‌ನಲ್ಲಿ ಅವರ ಭಾವಚಿತ್ರವನ್ನು ರಚಿಸಲಾಗಿದೆ. 


Trending videos

Back to Top