CONNECT WITH US  

ತಮ್ಮ 3.2 ಕೋಟಿ ರೂ. ಜೀವ ವಿಮೆಗಾಗಿ ಮತ್ತಿಬ್ಬರನ್ನು ಜೀವಂತ ಸುಟ್ಟರು!

ಇಬ್ಬರು ಸೇರಿ ತಾವು ಸತ್ತಿರುವುದಾಗಿ ನಂಬಿಸಿ 3.2 ಕೋಟಿ ರೂಪಾಯಿ ಜೀವ ವಿಮೆ...

ನವದೆಹಲಿ: ತನ್ನ ಹೆಸರಿನಲ್ಲಿದ್ದ 3.2 ಕೋಟಿ ರೂಪಾಯಿ ಇನ್ಸೂರೆನ್ಸ್ ಹಣ ಪಡೆಯುವ ನಿಟ್ಟಿನಲ್ಲಿ ಇಬ್ಬರನ್ನು ಕಾರಿನೊಳಗೆ ಕೂಡಿ ಹಾಕಿ ಜೀವಂತವಾಗಿ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಮಥುರಾದಲ್ಲಿ ನಡೆದಿದೆ.

ಸಿಕ್ಕಿಬಿದ್ದಿದ್ದು ಹೇಗೆ?

ಕುನ್ವಾರ್ ಪಾಲ್(40ವರ್ಷ) ಹಾಗೂ ಲೇಖಾನ್ (38ವರ್ಷ) ಸೇರಿದಂತೆ ಇಬ್ಬರ ಸುಟ್ಟುಹೋದ ಶವ ಕಾರಿನೊಳಗೆ ಪತ್ತೆಯಾಗಿತ್ತು. ಈ ಇಬ್ಬರ ನಿಗೂಢ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಲಾಲಾರಾಮ್ (35) ಮತ್ತು ರೋಹ್ಟಾಶ್ (34) ಇಬ್ಬರು ಸೇರಿ ತಾವು ಸತ್ತಿರುವುದಾಗಿ ನಂಬಿಸಿ 3.2 ಕೋಟಿ ರೂಪಾಯಿ ಜೀವ ವಿಮೆಯನ್ನು ಪಡೆಯಲು ಮತ್ತಿಬ್ಬರು ಗೆಳೆಯರನ್ನು ಕಾರಿನೊಳಗೆ ಜೀವಂತವಾಗಿ ಸುಟ್ಟು ಬಿಟ್ಟಿದ್ದರು.

ಮೃತದೇಹದ ಗುರುತು ಪತ್ತೆಯಾಗದಂತೆ ಮಾಡಿ ಜೀವ ವಿಮೆ ಪಡೆಯಬೇಕೆಂದು ಲಾಲಾರಾಮ್ ಮತ್ತು ರೋಹ್ಟಾಶ್ ಸಂಚು ರೂಪಿಸಿದ್ದರು. ಕೊನೆಗೂ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.


Trending videos

Back to Top