CONNECT WITH US  

ಪುರಿ ಕೊನಾರ್ಕದಲ್ಲಿ ವಾರ್ಷಿಕ ಮಾಘ ಮೇಳ: ಪವಿತ್ರ ಸಮುದ್ರ ಸ್ನಾನ

ಭುವನೇಶ್ವರ : ಮಾಘ ಸಪ್ತಮಿಯಂದು ನಡೆಯುವ ವಾರ್ಷಿಕ ಮಾಘ ಮೇಳದ ಪವಿತ್ರ ಸಂದರ್ಭದಲ್ಲಿ ಇಂದು ಮಂಗಳವಾರ ಸಹಸ್ರಾರು ಶ್ರದ್ಧಾಳುಗಳು ಒಡಿಶಾದ ಪುರಿ ಜಿಲ್ಲೆಯ ಕೊನಾರ್ಕ್‌ ಸಮೀಪದ ಚಂದ್ರಭಾಗಾ ಸಮುದ್ರ ತೀರದಲ್ಲಿ  ನಸುಕಿನ ವೇಳೆ ಪವಿತ್ರ ಸ್ನಾನ ಗೈದು ಸೂರ್ಯ ದೇವರಿಗೆ ಪೂಜೆ ಸಲ್ಲಿಸಿದರು. 

ಮಾಘ ಮಾಸ ಶುಕ್ಲ ಪಕ್ಷದ ಏಳನೇ ದಿನವು ಸೂರ್ಯ ದೇವರ ಪವಿತ್ರ ಜನ್ಮ ದಿನವೆಂದು ತಿಳಿಯಲಾಗಿದ್ದು ಆ ಪ್ರಕಾರ ಇಂದು ಸಹಸ್ರಾರು ಶ್ರದ್ಧಾಳುಗಳು ತಮ್ಮ ಪಾಪ ಪರಿಮಾರ್ಜನೆ ಮತ್ತು ಚರ್ಮ ರೋಗದಿಂದ ಮುಕ್ತಿ ಪಡೆಯಲು ಸಮುದ್ರ ಸ್ನಾನ ಕೈಗೊಂಡರು. 

ಪೌರಾಣಿಕ ನಂಬಿಕೆ ಪ್ರಕಾರ ಭಗವಾನ್‌ ಶ್ರೀ ಕೃಷ್ಣನ ಪುತ್ರ ಸಾಂಬಾ, ಚಂದ್ರಭಾಗಾ ಸಮುದ್ರ ತೀರದಲ್ಲಿ ಇದೇ ದಿನ ಪವಿತ್ರ ಸ್ನಾನಗೈದು ಸೂರ್ಯ ದೇವರನ್ನು ಪೂಜಿಸುವ ಮೂಲಕ ತನಗಂಟಿದ ಕುಷ್ಠ ರೋಗದಿಂದ ಮುಕ್ತನಾಗಿದ್ದ ಎಂಬ ಐತಿಹ್ಯವಿದೆ. 


Trending videos

Back to Top