ವಾಟ್ಸಾಪ್ನಲ್ಲಿ ಹಿಂದೂ ದೇವರ ಆಕ್ಷೇಪಾರ್ಹ ಫೋಟೋ ಶೇರ್; ಬಂಧನ
Team Udayavani, Mar 7, 2019, 9:59 AM IST
ಬಲ್ಲಿಯಾ : ಹಿಂದೂ ದೇವರ ಆಕ್ಷೇಪಾರ್ಹ ಚಿತ್ರವೊಂದನ್ನು ವಾಟ್ಸಾಪ್ ನಲ್ಲಿ ಶೇರು ಮಾಡಿಕೊಂಡನೆನ್ನಲಾದ ಯುವಕನೋರ್ವನನ್ನು ಬಂಧಿಸಿರುವುದಾಗಿ ಪೊಲೀಸರು ಇಂದು ಗುರುವಾರ ತಿಳಿಸಿದ್ದಾರೆ.
ಬಂಧಿತ ತರುಣ ಮೊಹಮ್ಮದ್ ನಯೀಮ್ ಎಂಬಾತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಸುಪರಿಂಟೆಂಡೆಂಟ್ ವಿಜಯ್ ಪಾಲ್ ಸಿಂಗ್ ತಿಳಿಸಿದ್ದಾರೆ.