20 ರೂ.ಹೊಸ ನಾಣ್ಯ ಬಿಡುಗಡೆ
Team Udayavani, Mar 8, 2019, 12:30 AM IST
ಹೊಸದಿಲ್ಲಿ: ಕೇಂದ್ರ ಸರಕಾರ 20 ರೂ.ಮೌಲ್ಯದ ಹೊಸ ನಾಣ್ಯ ಬಿಡುಗಡೆ ಮಾಡಿದೆ. ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅದನ್ನು ಬಿಡುಗಡೆ ಮಾಡಿದ್ದಾರೆ. ಇದರ ವಿಶೇಷತೆಯೆಂದರೆ 12 ಮೂಲೆಗಳಿರುವ ಮೊದಲ ನಾಣ್ಯ. ಇದರ ಜತೆಗೆ ಹೊಸ ಮಾದರಿಯ 1, 2, 5, 10 ರೂ.ನಾಣ್ಯಗಳನ್ನೂ ಬಿಡುಗಡೆ ಮಾಡಲಾಗಿದೆ.
3.09 ಗ್ರಾಂ- ಹೊಸ 1 ರೂ.ನಾಣ್ಯದ ತೂಕ
4.07 ಗ್ರಾಂ- ಹೊಸ 2 ರೂ.ನಾಣ್ಯದ ತೂಕ
6.74 ಗ್ರಾಂ- ಹೊಸ 5 ರೂ. ನಾಣ್ಯದ ತೂಕ
7.74 ಗ್ರಾಂ- ಹೊಸ 10 ರೂ. ನಾಣ್ಯದ ತೂಕ
27 ಮಿಮೀ- ಹೊಸ 10 ರೂ. ನಾಣ್ಯದ ವ್ಯಾಸ
ಟಂಕಿಸುವ ಸ್ಥಳ
ಮುಂಬೈ, ಆಲಿಪುರ್, ಸೈಫಾಬಾದ್, ಚೇರ್ಲಪಲ್ಲಿ (2 ಸ್ಥಳಗಳೂ ಹೈದರಾಬಾದ್ನಲ್ಲಿ), ನೋಯ್ಡಾ
27 ಮಿಲಿಮೀಟರ್-ಒಟ್ಟು ವ್ಯಾಸ
8.54 ಗ್ರಾಂ: ನಾಣ್ಯದ ತೂಕ
10 ವರ್ಷ-ಇಷ್ಟು ಸಮಯದ ಬಳಿಕ ಹೊಸ ನಾಣ್ಯ ಬಿಡುಗಡೆ
ಏನೇನು ಬಳಕೆ
ಶೇ.65- ತಾಮ್ರ
ಶೇ.15- ಸತು
ಶೇ.20- ನಿಕ್ಕೆಲ್
ಉಂಗುರಾಕಾರದ ಭಾಗ
ಶೇ.75- ತಾಮ್ರ
ಶೇ.20- ಸತು
ಶೇ.05- ನಿಕ್ಕೆಲ್
ವಿಶೇಷತೆಗಳೇನು?
– ಎಡಭಾಗದಲ್ಲಿ ಧಾನ್ಯಗಳನ್ನು ಕೆತ್ತಲಾಗಿದ್ದು, ಅದು ಕೃಷಿಯೇ ದೇಶದ ಪ್ರಧಾನ ವ್ಯವಸ್ಥೆ ಎಂದು ಬಿಂಬಿಸುತ್ತದೆ.
– ಹಿಂಭಾಗದಲ್ಲಿ 20 ರೂ. ಎಂದು ಮುದ್ರಿಸಲಾಗಿದೆ. ಜತೆಗೆ ರೂಪಾಯಿ ಚಿಹ್ನೆ ಇದೆ.
– ಮುಂಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಮತ್ತು “ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ.
– ಎಡಭಾಗದಲ್ಲಿ ಹಿಂದಿಯಲ್ಲಿ “ಭಾರತ್’ ಮತ್ತು ಬಲ ಭಾಗದಲ್ಲಿ ಇಂಗ್ಲಿಷ್ನಲ್ಲಿ “ಇಂಡಿಯಾ’ ಎಂದು ಇದೆ.