ಸೆನ್ಸೆಕ್ಸ್ ಜಿಗಿತ
Team Udayavani, Mar 13, 2019, 12:30 AM IST
ಮುಂಬಯಿ: ವಿದೇಶಿ ಹೂಡಿಕೆದಾರರ ಒಲವು, ಬಲಗೊಂಡ ರೂಪಾಯಿ ಮತ್ತು ಮತ್ತೆ ಎನ್ಡಿಎ ಅಧಿಕಾರಕ್ಕೆ ಬರುವ ಸಾಧ್ಯತೆಯ ಸಮೀಕ್ಷೆಗಳಿಂದಾಗಿ ಮುಂಬಯಿ ಶೇರು ಪೇಟೆ ಸೂಚ್ಯಂಕ ಮಂಗಳವಾರ 481 ಅಂಕ ಮೇಲೇರಿದೆ. ಸೋಮವಾರ 383 ಅಂಕ ಮೇಲೇರಿದ್ದು, ಸತತ ಎರಡನೇ ದಿನವೂ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 37,535.66 ಅಂಕಗಳಲ್ಲಿ ಮತ್ತು ನಿಫ್ಟಿ 11,301.20 ಅಂಕಗಳಲ್ಲಿ ಕೊನೆಗೊಂಡಿತು.