10 ಲಕ್ಷ ಹ್ಯಾಂಡ್ ಗ್ರೆನೇಡ್ ಖರೀದಿಗೆ ಮುಂದಾದ ಭಾರತೀಯ ಸೇನೆ
Team Udayavani, Mar 15, 2019, 2:57 PM IST
ಹೊಸದಿಲ್ಲಿ: ಪಾಕಿಸ್ಥಾನ ವಿರುದ್ಧ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ವೇಳೆಯಲ್ಲಿ ರಕ್ಷಣಾ ಇಲಾಖೆ 10 ಲಕ್ಷ ಹ್ಯಾಂಡ್ ಗ್ರೆನೇಡ್ ಖರೀದಿಗಾಗಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಮುಂದಾಗಿದೆ.
ಮಿಲಿಟರಿ ವಲಯಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮಲ್ಟಿ ಮೋಡ್ ಹ್ಯಾಂಡ್ ಗ್ರೆನೇಡ್ಗಳನ್ನು ಖರೀದಿ ಮಾಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ರಕ್ಷಣಾ ಇಲಾಖೆಯ ಮಹತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.
500 ಕೋಟಿ ರೂಪಾಯಿಯನ್ನು ಹ್ಯಾಂಡ್ ಗ್ರೆನೇಡ್ಗಳ ಖರೀದಿಗಾಗಿ ವ್ಯಯಿಸಲಾಗುತ್ತಿದೆ. ಈಗಾಗಲೇ ರಕ್ಷಣಾ ಇಲಾಖೆ 700 ಕೋಟಿ ರೂಪಾಯಿಯನ್ನು 75 ಸಾವಿರ ಸಿಗ್ ಸೌರ್ ಅಸಾಲ್ಟ್ ರೈಫಲ್ಗಳ ಖರೀದಿಗಾಗಿ ಮೀಸಲಿರಿಸಿದ್ದು, ಅಮೆರಿಕದ ಕಂಪೆನಿಯಿಂದ ಖರೀದಿಸಲಾಗುತ್ತಿದೆ. ಇನ್ನೊಂದೆಡೆ 7.5 ಎಕೆ-203 ರೈಫಲ್ಸ್ಗಳ ಉತ್ಪಾದನೆಗಾಗಿ ರಶ್ಯದೊಂದಿಗೆ ಜಂಟಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ