ಮೋದಿಯವರೇ ನಮ್ಮ ಹಣ ಎಲ್ಲಿದೆ?
Team Udayavani, Mar 17, 2019, 12:51 PM IST
ಪ್ರಧಾನಿ ನರೇಂದ್ರ ಮೋದಿಯವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವವರಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಮತ್ತು ನಟಿ ರಮ್ಯಾ ಅವರು ಈ ಬಾರಿ ಮತ್ತೆ ಪ್ರಧಾನಿಯವರನ್ನು ಟೀಕಿಸಿದ್ದಾರೆ. ವಿವಿಧ ಸರಕಾರಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಸರಕಾರವು ವೇತನ ಪಾವತಿಯನ್ನು ಮಾಡಿಲ್ಲ ಎಂಬ ಮಾಧ್ಯಮ ವರದಿಗಳ ಆಧಾರದಲ್ಲಿ ರಮ್ಯಾ ಅವರು ಟ್ವಿಟ್ಟರ್ ಮೂಲಕ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.
‘ಲಕ್ಷಾಂತರ ಸರಕಾರಿ ಉದ್ಯೋಗಳಿಗೆ ಕೇಂದ್ರ ಸರಕಾರವು ತಿಂಗಳ ವೇತನವನ್ನು ಪಾವತಿಸಿಲ್ಲ. ತಮ್ಮ ಸ್ವಂತ ಪ್ರಚಾರಕ್ಕಾಗಿ ಸಾರ್ವಜನಿಕ ಹಣವನ್ನು ಪ್ರಧಾನಿಯವರು ದುರುಪಯೋಗ ಮಾಡ್ತಿದ್ರೆ, ಜನಸಾಮಾನ್ಯರು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ, ಮೋದಿಯವರು ತೈಲ ಬೆಲೆಗಳ ಮೇಲೆ ಆಟವಾಡುತ್ತಿದ್ದಾರೆ’ ಎಂದು ರಮ್ಯಾ ತನ್ನ ಇತ್ತೀಚೆಗಿನ ಟ್ವೀಟ್ ನಲ್ಲಿ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಈ ಟ್ವೀಟ್ ಗೆ ಪೂರಕವಾಗಿ ರಮ್ಯಾ ಅವರು ಕೆಲವು ಪತ್ರಿಕೆಗಳ ಶೀರ್ಷಿಕೆಗಳಿರುವ ಫೊಟೋ ಒಂದನ್ನು ಅಟ್ಯಾಚ್ ಮಾಡಿದ್ದಾರೆ. ತಮ್ಮದೇ ಇನ್ನೊಂದು ಟ್ವೀಟ್ ನಲ್ಲಿ ಪ್ರಧಾನಿ ಅವರು ನಮ್ಮಂತೆಯೇ ತಪ್ಪುಗಳನ್ನು ಮಾಡುತ್ತಾರೆ ಎಂದು ಬರೆದುಕೊಂಡು, ಪ್ರಧಾನಿಯವರ ಮಿಸ್ಟೇಕ್ ಗಳಿರುವ ವಿಡಿಯೋ ತುಣುಕೊಂದನ್ನು ತಮ್ಮ ಟ್ವೀಟ್ ಜೊತೆ ಹಂಚಿಕೊಂಡಿದ್ದಾರೆ.
We all make mistakes so does the PM- pic.twitter.com/YZHN3As9UI
— Divya Spandana/Ramya (@divyaspandana) January 29, 2018