ಎನ್‌ಡಿಎಗೆ ಬಹುಮತ: ಸಮೀಕ್ಷೆ
Team Udayavani, Dec 25, 2018, 6:00 AM IST
ನವದೆಹಲಿ: ಈಗಲೇ ಲೋಕಸಭೆ ಚುನಾವಣೆ ನಡೆದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 291 ಸ್ಥಾನಗಳು ಸಿಗಲಿವೆ. ಸರಳ ಬಹುಮತ (272)ಕ್ಕಿಂತ 19 ಸ್ಥಾನಗಳು ಹೆಚ್ಚು. ಎಬಿಪಿ ನ್ಯೂಸ್ ಮತ್ತು ಸಿ ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.
ಯುಪಿಎಗೆ 171, ಇತರರಿಗೆ 87 ಸ್ಥಾನಗಳು ಲಭಿಸಲಿವೆ. ಆದರೆ, ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳದೇ ಸ್ಪರ್ಧಿಸಿದರೆ ಮಾತ್ರ ಈ ರೀತಿ ಫಲಿತಾಂಶ ಬರಲಿದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ. ಆ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೆ ಎನ್‌ಡಿಎಗೆ 247 ಸ್ಥಾನಗಳು ಸಿಗಲಿವೆ ಎಂದು ಅಭಿಪ್ರಾಯ ಪಡಲಾಗಿದೆ. ದಕ್ಷಿಣ ಭಾರತದ 129 ಸ್ಥಾನಗಳಲ್ಲಿ ಎನ್‌ಡಿಎ 15, ಯುಪಿಎ 80, ಇತರರು 34 ಸ್ಥಾನಗಳನ್ನು ಗೆಲ್ಲಲಿದ್ದಾರೆ.
ಕರ್ನಾಟಕದಲ್ಲಿ: ಇದೇ ವೇಳೆ ರಿಪಬ್ಲಿಕ್ ಟಿವಿ ಮತ್ತು ಸಿ ವೋಟರ್ ನಡೆಸಿದ ಮತ್ತೂಂದು ಸಮೀಕ್ಷೆಯಲ್ಲಿ ಎನ್‌ಡಿಎಗೆ 247 ಸ್ಥಾನಗಳನ್ನು ನೀಡಲಾಗಿದೆ. ರಿಪಬ್ಲಿಕ್ ಟಿವಿ ಪ್ರಕಾರ ಕರ್ನಾಟಕದಲ್ಲಿ 28 ಸ್ಥಾನಗಳಲ್ಲಿ 15 ಎನ್‌ಡಿಎ, 13 ಯುಪಿಎ ಗೆಲ್ಲಲಿದೆ. ಉ.ಪ್ರ.ದಲ್ಲಿ ಮಹಾ ಮೈತ್ರಿಕೂಟ 50, ಯುಪಿಎ 2 ಸ್ಥಾನಗಳನ್ನು ಗೆಲ್ಲಲಿದೆ. ಕೇರಳದ 20 ಸ್ಥಾನಗಳ ಪೈಕಿ 17ರಲ್ಲಿ ಯುಪಿಎ, ಎಲ್‌ಡಿಎಫ್ 3 ಸ್ಥಾನಗಳಲ್ಲಿ ಗೆಲ್ಲಲಿದೆ.
(ಮಹಾಮೈತ್ರಿ ಇಲ್ಲದಿದ್ದರೆ)
ಎನ್‌ಡಿಎ 291
ಯುಪಿಎ 171
ಇತರರು 81
(ಮೈತ್ರಿ ಏರ್ಪಟ್ಟಲ್ಲಿ)
ಎನ್‌ಡಿಎ 247
ಯುಪಿಎ 171
ಇತರರು 125
ಕರ್ನಾಟಕದಲ್ಲಿ (ರಿಪಬ್ಲಿಕ್ ಟಿವಿ)
ಎನ್‌ಡಿಎ 15
ಯುಪಿಎ 13
ಒಟ್ಟು 28
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?