ಇನ್ನು ಮುಂದೆ “ಕ್ವಾಲಿಟಿ ವಾಲ್ಸ್’ ಐಸ್ಕ್ರೀಂ ಅಲ್ಲ!
Team Udayavani, Mar 22, 2019, 12:30 AM IST
ಹೊಸದಿಲ್ಲಿ: “ಕ್ವಾಲಿಟಿ ವಾಲ್ಸ್’ ಬ್ರಾಂಡ್ನ ಅಡಿಯಲ್ಲಿ ತಯಾರಾಗುವ ವಿವಿಧ ಖಾದ್ಯಗಳ ಮೇಲೆ ಐಸ್ ಕ್ರೀಂ ಎಂಬ ಹೆಸರನ್ನು ಮುದ್ರಿಸದಿರುವಂತೆ ಕ್ವಾಲಿಟಿ ವಾಲ್ಸ್ ಮಾಲೀಕತ್ವ ಹೊಂದಿರುವ ಸಂಸ್ಥೆಯಾದ “ಹಿಂದೂಸ್ತಾನ್ ಲೀವರ್ ಲಿಮಿಟೆಡ್’ಗೆ “ಅಡ್ವಟೈìಸಿಂಗ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ’ ಸೂಚಿಸಿದೆ.
ಡೈರಿ ಉತ್ಪನ್ನಗಳ ಖ್ಯಾತ ಸಂಸ್ಥೆಯಾದ “ಅಮೂಲ್’ ನೀಡಿದ ದೂರಿನ ಮೇರೆಗೆ ಈ ಸೂಚನೆ ನೀಡಲಾಗಿದೆ. “ಕ್ವಾಲಿಟಿ ವಾಲ್ಸ್’ ಖಾದ್ಯಗಳು ತರಕಾರಿಗಳ ಕೊಬ್ಬಿನಿಂದ ಸಿದ್ಧಗೊಂಡಿವೆ. ಹಾಲಿನ ಉತ್ಪನ್ನವಲ್ಲವಾದ್ದರಿಂದ “ಐಸ್ ಕ್ರೀಂ’ ಎನ್ನುವಂತಿಲ್ಲ ಎಂದು “ಅಮೂಲ್’ ತನ್ನ ದೂರಿನಲ್ಲಿ ಉಲ್ಲೇಖೀಸಿತ್ತು.